ಮಡಿಕೇರಿ, ಅ. 16: ಪ್ರಕೃತಿಯ ಮೇಲೆ ಅಭಿವೃದ್ಧಿ ಹೆಸರಲ್ಲಿ ನಡೆದ ಅತ್ಯಾಚಾರಗಳೇ ವಿಕೋಪದ ರೂಪ ತಳೆದಿರುವದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೆಲವು ಕವಿಗಳು ಕೂಡ ಅದನ್ನು ಕವನಗಳ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಇನ್ನು ಮುಂದಾದರೂ ಪ್ರಕೃತಿ, ಪರಿಸರ, ಗಿರಿ ಕಂದರಗಳನ್ನು ರಕ್ಷಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಮುಂದೆಯೂ ಇಂತಹ ದುರಂತಗಳು ಸಂಭವಿಸುವ ಸಾಧ್ಯತೆ ಇದೆ; ಕವಿಗೋಷ್ಠಿಯಲ್ಲಿ 9 ನಿರ್ಣಯaಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಿ ಸಂತ್ರಸ್ತರ ವಾಸ್ತವಾಂಶವನ್ನು ಅವರಿಗೆ ಮಡಿಕೇರಿ, ಅ. 16: ಪ್ರಕೃತಿಯ ಮೇಲೆ ಅಭಿವೃದ್ಧಿ ಹೆಸರಲ್ಲಿ ನಡೆದ ಅತ್ಯಾಚಾರಗಳೇ ವಿಕೋಪದ ರೂಪ ತಳೆದಿರುವದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೆಲವು ಕವಿಗಳು ಕೂಡ ಅದನ್ನು ಕವನಗಳ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಇನ್ನು ಮುಂದಾದರೂ ಪ್ರಕೃತಿ, ಪರಿಸರ, ಗಿರಿ ಕಂದರಗಳನ್ನು ರಕ್ಷಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಮುಂದೆಯೂ ಇಂತಹ ದುರಂತಗಳು ಸಂಭವಿಸುವ ಸಾಧ್ಯತೆ ಇದೆ; ಕವಿಗೋಷ್ಠಿಯಲ್ಲಿ 9 ನಿರ್ಣಯಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಿ ಸಂತ್ರಸ್ತರ ವಾಸ್ತವಾಂಶವನ್ನು ಅವರಿಗೆ (ಮೊದಲ ಪುಟದಿಂದ) ಮತ್ತು ಮಾಧ್ಯಮಗಳೇ ನೇರವಾಗಿ ಕಂಡಿದ್ದು, ಅದನ್ನು ದೇಶಕ್ಕೆ ತಿಳಿಸಿದ್ದೀರಿ. ಇದೀಗ ಸರಕಾರಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ಹೇಳಿದರು.
ಈ ಬಾರಿಯ ದಸರಾಕ್ಕೆ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ರೂ. 50 ಲಕ್ಷ ಅನುದಾನ ನೀಡಿದ್ದಾರೆ. ಸಾಂಪ್ರದಾಯಿಕ ದಸರಾ ಆಚರಿಸುವಂತೆಯೂ ಸಚಿವರು ಸೂಚಿಸಿದ್ದಾರೆ. ಹೀಗಿದ್ದರೂ ಆಡಂಬರವೇಕೆ ಎಂದು ಪ್ರಶ್ನಿಸಿದ ಅವರು, ಈ ಹಣವನ್ನು ಸಂತ್ರಸ್ತರಿಗೆ ಹಂಚಿಕೆ ಮಾಡಿ ಎಂದು ಸಲಹೆ ನೀಡಿದರು. 1962-1980 ಅವಧಿಯಲ್ಲಿ ತಾವೂ ಕೂಡ ನಗರ ದಸರಾ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದು, ಹಿಂದೆ ಸಾಂಪ್ರದಾಯಿಕವಾಗಿ ಕರಗಗಳ ಪ್ರದಕ್ಷಿಣೆಗೆ ಸೀಮಿತವಾಗಿದ್ದ ದಸರಾ ಇದೀಗ ಆಡಂಬರದ ರೂಪ ಪಡೆದಿದೆ. 1967 ರಿಂದ ಮಂಟಪಗಳ ಮೆರವಣಿಗೆ ಆರಂಭವಾಗಿ, ಇಲ್ಲಿಂದಲೇ ಆಡಂಬರತೆಯ ರೂಪ ಪಡೆದಿದೆ ಎಂದು ಹೇಳಿದರು. ಸರಳ ಮತ್ತು ಸಂಪ್ರದಾಯದ ದಸರಾ ಆಚರಣೆಗೆ ದಸರಾ ಸಮಿತಿ ಮುಂದಾಗಬೇಕು ಎಂದು ಯಂ.ಸಿ. ನಾಣಯ್ಯ ಸಲಹೆ ನೀಡಿದರು.
ತಾ. 17 ರಂದು (ಇಂದು) ಮುಖ್ಯಮಂತ್ರಿ ಕುಮಾರಸ್ವಾಮಿ ಮಡಿಕೇರಿಗೆ ಆಗಮಿಸಿ ಸಂತ್ರಸ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಸಂವಾದ ಸಂದರ್ಭ ಮುಖ್ಯಮಂತ್ರಿಗಳು ರಾಜ್ಯ ಸರಕಾರ ಸಂತ್ರಸ್ತರಿಗೆ ನೀಡಲಿರುವ ನೆರವುಗಳ ಬಗ್ಗೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. ದಿನ ಕಳೆದಂತೆ ಸಂತ್ರಸ್ತರು ಹತಾಶರಾಗುತ್ತಿದ್ದಾರೆ. ಮುಂದಿನ ಜೀವನ ಹೇಗೆಂದು ಚಿಂತಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಸೂಕ್ತ ನೆರವಿನ ಘೋಷಣೆಯನ್ನು ಮುಖ್ಯಮಂತ್ರಿಗಳು ಮಾಡಬೇಕೆಂದು ನಾಣಯ್ಯ ಆಗ್ರಹಿಸಿದರು.