ಸುಂಟಿಕೊಪ್ಪ, ಅ. 16: ಇಲ್ಲಿಗೆ ಸಮೀಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ವಿಶೇಷ ಶಾಲೆಯಲ್ಲಿ ಆಯೋಜಿಸಿದ ಪೋಷಕರ ಸಭೆಯಲ್ಲಿ ಪೋಷಕರಿಗಾಗಿ ಆರೋಗ್ಯ ಮತ್ತು ಇಲಾಖೆ ವತಿಯಿಂದ ಇರುವ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಮಾತನಾಡಿ, ಸ್ವಸ್ಥ ಸಂಸ್ಥೆಯು ಕೊಡಗಿನಲ್ಲೆ ಅತಿ ಹೆಚ್ಚು ದಿವ್ಯಾಂಗÀರನ್ನು ಭೇಟಿ ಮಾಡಿ ಸಾಕಷ್ಟು ಸರ್ಕಾರಿ ಸವಲತ್ತುಗಳನ್ನು ತಲಪಿಸುತ್ತಿರುವದು ಶ್ಲಾಘನೀಯ ಎಂದರು. ಅಲ್ಲದೆ ಸರ್ಕಾರದಿಂದ ಯಾವದೇ ಅನುದಾನವನ್ನು ಪಡೆಯದೆ 130ಕ್ಕೂ ಹೆಚ್ಚು ವಿಕಲಚೇತನ ಮಕ್ಕಳಿಗಾಗಿ ಸ್ವಸ್ಥ ಎಂಬ ವಿಶೇಷ ಶಾಲೆಯನ್ನು ಪ್ರಾರಂಭಿಸಿ ಹಗಲಿರುಳು ಶ್ರಮಿಸುತ್ತಿರುವದು ಕೊಡಗಿಗೆ ವರದಾನವಾಗಿದೆ. ಈ ಸಂದರ್ಭ ನಮ್ಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ವತಿಯಿಂದ ಉಚಿತವಾಗಿ ಸಾಕಷ್ಟು ಸವಲತ್ತುಗಳಿದ್ದು ಅವುಗಳನ್ನು ಸಂಪೂರ್ಣವಾಗಿ ಈ ಮಕ್ಕಳಿಗೆ ನೇರವಾಗಿ ತಲಪಿಸುತ್ತೇವೆ ಜೊತೆಗೆ ಈ ಮಕ್ಕಳಿಗಿರುವ ಎಲ್ಲಾ ತರಹದ ಮಾತ್ರೆಗಳನ್ನು ಉಚಿತವಾಗಿ ನೀಡುತ್ತೇವೆಂದು ತಿಳಿಸಿದರು. ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದÀ ಸಿ.ಬಿ.ಆರ್. ಸಂಯೋಜಕ ಮುರುಗೇಶ್ ಸರಕಾರದ ಸೌಲಭ್ಯವನ್ನುü ವಿಕಲಚೇತನರಿಗೆ ತಲಪಿಸುವಲ್ಲಿ ಎತ್ತಿದ ಕೈ. ಅವರ ಸೇವೆಯನ್ನು ನಾವೆಲ್ಲರೂ ಈ ಸಂದರ್ಭ ಸ್ಮರಿಸಬೇಕೆಂದರು.
ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ ಕೊಡಗು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿನ ಜಿಲ್ಲಾ ಸಂಯೋಜಕ ತೇಜಸ್ ಮಾತನಾಡಿ, ಜಿಲ್ಲೆಯಲ್ಲಿ ಟ್ರಸ್ಟ್ ವತಿಯಿಂದ ಸುಮಾರು 10 ಜನ ಸಿಬ್ಬಂದಿಗಳಿದ್ದು ಸರ್ವರಿಗೂ ಅದರಲ್ಲೂ ವಿಕಲಚೇತನರಿಗೆÉ ಉಚಿತವಾಗಿ ಎಲ್ಲಾ ಯೋಜನೆಗಳನ್ನು ತಲಪಿಸುತ್ತೇವೆ ಎಂದರು ಪ್ರಸ್ತುತ ನಮ್ಮಲ್ಲಿ ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮ, ಆರೋಗ್ಯ ಕರ್ನಾಟಕ, ಆಯುಷ್ಮಾನ್ ಭಾರತ್, ವಾಜಪೇಯಿ ಆರೋಗ್ಯ ಯೋಜನೆ, ಸ್ವಾಸ್ಥ್ಯ ಭೀಮ ಯೋಜನೆ, ಇನ್ನು ಅನೇಕ ಯೋಜನೆಗಳಿದ್ದು ಸರಿ ಸುಮಾರು 10 ಲಕ್ಷದ ವರೆಗೂ ಬಿ.ಪಿ.ಎಲ್. ಕಾರ್ಡನ್ನು ಹೊಂದಿರುವ ಬಡವರಿಗಾಗಿ ನಿಯೋಜಿಸಲ್ಪಟ್ಟಿದ್ದು, ಎ.ಪಿ.ಎಲ್. ಕಾರ್ಡು ಹೊಂದಿರುವ ಫಲಾನುಭವಿಗಳಗೂ ಕೆಲವು ಮೀಸಲಾತಿ ರಿಯಾಯಿತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಇವುಗಳ ಸದುಪಯೋಗವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೋಷಕರ ಪ್ರತಿನಿಧಿಯಾಗಿದ್ದ ಕೊಟ್ಟಾಯಪ್ಪ ಮಾತನಾಡಿ, ವಿಕಲಚೇತನ ಮಕ್ಕಳು ಆಕಸ್ಮಿಕವಾಗಿ ಜನಿಸುವದು ದೇವರು ನೀಡಿರುವ ಅನಿವಾರ್ಯತೆ ಸ್ವೀಕರಿಸಿ ಆ ಮಕ್ಕಳ ಸೇವೆಯನ್ನು ಮಾಡಿದ್ದಲ್ಲಿ ನಮಗೆ ಮುಕ್ತಿ ದೊರೆಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜಲಪ್ರಳಯದಿಂದ ಮನೆ ಕಳೆದುಕೊಂಡ ಪೋಷಕರೊಬ್ಬರಿಗೆ ಪೋಷಕರ ಸಂಘದ ವತಿಯಿಂದ ರೂ. 5 ಸಾವಿರಗಳ ಚೆಕ್‍ನ್ನು ವಿತರಿಸಲಾಯಿತು. ಜೊತೆಗೆ ಸ್ವಸ್ಥ ಸಂಸ್ಥೆಯ ಸಿ.ಬಿ.ಆರ್. ಯೋಜನೆಯಿಂದ 4 ಮಕ್ಕಳಿಗೆ ವಿಕಲಚೇತನರ ಇಲಾಖೆಯಿಂದ ನೀಡಲಾಗುವ ವಿಕಲಚೇತನರ ಗುರುತಿನ ಚೀಟಿಯನ್ನು ಉಚಿತವಾಗಿ ಮಾಡಿಸಿ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ವಹಿಸಿದ್ದರು. ಪೋಷಕರ ಸಂಘದ ಅಧ್ಯಕ್ಷೆ ಶಾಂತಿ, ಸಿ.ಬಿ.ಆರ್. ಸಂಯೋಜಕ ಮುರುಗೇಶ ಎಸ್. ಉಪಸ್ಥಿತರಿದ್ದರು. ಸ್ವಸ್ಥ ಶಾಲೆಯ ಮಕ್ಕಳಾದ ವಿದ್ಯಾ, ನಿಶಾ ಪ್ರಾರ್ಥಿಸಿದರು, ವಿಶೇಷ ಶಿಕ್ಷಕಿ ಮಂಜುಳ ಸ್ವಾಗತಿಸಿದರು, ವಿಶೇಷ ಶಿಕ್ಷಕಿ ಸುಮ ವಂದಿಸಿದರು. ವಿಶೇಷ ಶಿಕ್ಷಕಿ ರೇಖಾ ಡಿ. ನಿರೂಪಿಸಿದರು. ಸಿ. ಬಿ. ಆರ್. ಸಂಯೋಜಕರಾದ ಮುರುಗೇಶ್ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು.