ಭಾಗಮಂಡಲ, ಅ. 15: ಕೇರಳದಲ್ಲಿರುವ ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ನ್ಯಾಯಾಲಯ ತೀರ್ಪು ನೀಡಿರುವದನ್ನು ಖಂಡಿಸಿ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿದರು. ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಕಂದಾಯ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಅಮೆ ಬಾಲಕೃಷ್ಣ, ಜಯನ್, ದಾಮೋದರ, ರಾಜೀವ್, ಪದ್ಮಯ್ಯ, ಪ್ರದೀಶ, ಅಣ್ಣಯ್ಯ, ರವಿ, ಆಟೋ ಚಾಲಕರ ಸಂಘದ ಸದಸ್ಯರು ಇನ್ನಿತರರು ಇದ್ದರು.