ಚೆಟ್ಟಳ್ಳಿ, ಅ. 15: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಲ್ಲಾರಂಡ ಉತ್ತಪ್ಪ ತಂಡ ಗೆಲುವು ಸಾಧಿಸಿತು.
ಸಂಘದ ನಿರ್ದೇಶಕರ ಸ್ಥಾನಕ್ಕೆ 18 ಸದಸ್ಯರು ನಾಮಪತ್ರ ಸಲ್ಲಿಸಿದ್ದು ಒಬ್ಬರು ನಾಮಪತ್ರವನ್ನು ಹಿಂಪಡೆದರು. 6 ಸ್ಥಾನಕ್ಕೆ ಮಣಿಉತ್ತಪ್ಪ ಅವರ ತಂಡ ಅವಿರೋಧ ಆಯ್ಕೆ ನಡೆದು 11 ಸ್ಪರ್ಧಿಗಳಲ್ಲಿ 9 ಸಾಲಗಾರ ಹಾಗೂ 2 ಸಾಲಗಾರರೇತರರು ಸೇರಿ ಒಟ್ಟು11 ಸ್ಥಾನಕ್ಕೆ ಚುನಾವಣೆಯು ಚೆಟ್ಟಳ್ಳಿ ನರೇಂದ್ರ ಮೋದಿ ಸಹಕಾರ ಭವನದಲ್ಲಿ ನಡೆದಿತ್ತು.
ಸಾಲಗಾರ ಕ್ಷೇತ್ರಕ್ಕೆ 406 ಚುನಾಯಿತ ಸದಸ್ಯರಲ್ಲಿ 374 ಸಾಲಗಾರ ಸದಸ್ಯರು ಹಾಗು 78 ಸಾಲಗಾರೇvರ ಸದಸ್ಯರಲ್ಲಿ 69 ಸದಸ್ಯರು ಮತಚಲಾಯಿಸಿದರು. ಸಾಲಗಾರ ಕ್ಷೇತ್ರದಲ್ಲಿ 15 ಹಾಗು ಸಾಲಗಾರೇತರ ಕ್ಷೇತ್ರದಲ್ಲಿ 2 ಸೇರಿ 17 ಕುಲಗೆಟ್ಟ ಮತ ಚಲಾಯಿಸ ಲಾಯಿತು. ಸಾಲಗಾರ ಕ್ಷೇತ್ರಕ್ಕೆ 9 ಜನ ಸ್ಪರ್ಧಿಯಲ್ಲಿ ಸಂಘದ ಮಾಜಿ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ 318, ಹೆಚ್.ಎಸ್ ತಿಮ್ಮಪ್ಪ 254, ಅಪ್ಪಣ್ಣ ಬಟ್ಟೀರ 253, ಪೇರಿಯನ ಪೂಣ್ಣಚ್ಚ 238, ಪೂವಯ್ಯ ಕಣಜಾಲು 234 ಪಡೆದರೆ, ಸಾಲಗಾರೇತರ ಕ್ಷೇತ್ರದಲ್ಲಿ ಉಲ್ಲಾಸ ಮರದಾಳು 47 ಮತ ಪಡೆದು ಜಯಶೀಲರಾದರು. ಚೆಟ್ಟಳ್ಳಿ ಪಟ್ಟಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.
- ಕರುಣ್ ಕಾಳಯ್ಯ