ಭಾಗಮಂಡಲ, ಅ.15: ಕೊಡಗಿನ, ಪುರಾಣ ಪ್ರಸಿದ್ಧ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಇದೇ ತಾ.17ರಂದು ಸಂಜೆ 6.43 ಗಂಟೆಗೆ ಜರುಗಲಿರುವ ಪವಿತ್ರ ತೀರ್ಥೋದ್ಭವ ಸಲುವಾಗಿ ಸಕಲ ಸಿದ್ಧತೆ ನಡೆದಿದೆ. ಜಿಲ್ಲಾಡಳಿತ, ಭಾಗಮಂಡಲ ಗ್ರಾಮ ಪಂಚಾಯ್ತಿ, ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿಯ ಆಶ್ರಯದಲ್ಲಿ ಸಕಲ ತಯಾರಿ ನಡೆಯುತ್ತಿದೆ. ಕಾವೇರಿ ಕಾಡಿನ ತುಲಾಸಂಕ್ರಮಣ ಜಾತ್ರೆಗೆ ರಾಜ್ಯದ ಮುಖ್ಯ ಮಂತ್ರಿಗಳು ಆಗಮಿಸುವ ಭಾಗಮಂಡಲ, ಅ.15: ಕೊಡಗಿನ, ಪುರಾಣ ಪ್ರಸಿದ್ಧ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಇದೇ ತಾ.17ರಂದು ಸಂಜೆ 6.43 ಗಂಟೆಗೆ ಜರುಗಲಿರುವ ಪವಿತ್ರ ತೀರ್ಥೋದ್ಭವ ಸಲುವಾಗಿ ಸಕಲ ಸಿದ್ಧತೆ ನಡೆದಿದೆ. ಜಿಲ್ಲಾಡಳಿತ, ಭಾಗಮಂಡಲ ಗ್ರಾಮ ಪಂಚಾಯ್ತಿ, ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿಯ ಆಶ್ರಯದಲ್ಲಿ ಸಕಲ ತಯಾರಿ ನಡೆಯುತ್ತಿದೆ. ಕಾವೇರಿ ಕಾಡಿನ ತುಲಾಸಂಕ್ರಮಣ ಜಾತ್ರೆಗೆ ರಾಜ್ಯದ ಮುಖ್ಯ ಮಂತ್ರಿಗಳು ಆಗಮಿಸುವ ಭಾಗಮಂಡಲ, ಅ.15: ಕೊಡಗಿನ, ಪುರಾಣ ಪ್ರಸಿದ್ಧ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಇದೇ ತಾ.17ರಂದು ಸಂಜೆ 6.43 ಗಂಟೆಗೆ ಜರುಗಲಿರುವ ಪವಿತ್ರ ತೀರ್ಥೋದ್ಭವ ಸಲುವಾಗಿ ಸಕಲ ಸಿದ್ಧತೆ ನಡೆದಿದೆ. ಜಿಲ್ಲಾಡಳಿತ, ಭಾಗಮಂಡಲ ಗ್ರಾಮ ಪಂಚಾಯ್ತಿ, ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿಯ ಆಶ್ರಯದಲ್ಲಿ ಸಕಲ ತಯಾರಿ ನಡೆಯುತ್ತಿದೆ. ಕಾವೇರಿ ಕಾಡಿನ ತುಲಾಸಂಕ್ರಮಣ ಜಾತ್ರೆಗೆ ರಾಜ್ಯದ ಮುಖ್ಯ ಮಂತ್ರಿಗಳು ಆಗಮಿಸುವ

ಭಾಗಮಂಡಲ, ಅ.15: ಕೊಡಗಿನ, ಪುರಾಣ ಪ್ರಸಿದ್ಧ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಇದೇ ತಾ.17ರಂದು ಸಂಜೆ 6.43 ಗಂಟೆಗೆ ಜರುಗಲಿರುವ ಪವಿತ್ರ ತೀರ್ಥೋದ್ಭವ ಸಲುವಾಗಿ ಸಕಲ ಸಿದ್ಧತೆ ನಡೆದಿದೆ. ಜಿಲ್ಲಾಡಳಿತ, ಭಾಗಮಂಡಲ ಗ್ರಾಮ ಪಂಚಾಯ್ತಿ, ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿಯ ಆಶ್ರಯದಲ್ಲಿ ಸಕಲ ತಯಾರಿ ನಡೆಯುತ್ತಿದೆ. ಕಾವೇರಿ ಕಾಡಿನ ತುಲಾಸಂಕ್ರಮಣ ಜಾತ್ರೆಗೆ ರಾಜ್ಯದ ಮುಖ್ಯ ಮಂತ್ರಿಗಳು ಆಗಮಿಸುವ ಭಾಗಮಂಡಲ, ಅ.15: ಕೊಡಗಿನ, ಪುರಾಣ ಪ್ರಸಿದ್ಧ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಇದೇ ತಾ.17ರಂದು ಸಂಜೆ 6.43 ಗಂಟೆಗೆ ಜರುಗಲಿರುವ ಪವಿತ್ರ ತೀರ್ಥೋದ್ಭವ ಸಲುವಾಗಿ ಸಕಲ ಸಿದ್ಧತೆ ನಡೆದಿದೆ. ಜಿಲ್ಲಾಡಳಿತ, ಭಾಗಮಂಡಲ ಗ್ರಾಮ ಪಂಚಾಯ್ತಿ, ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿಯ ಆಶ್ರಯದಲ್ಲಿ ಸಕಲ ತಯಾರಿ ನಡೆಯುತ್ತಿದೆ. ಕಾವೇರಿ ಕಾಡಿನ ತುಲಾಸಂಕ್ರಮಣ ಜಾತ್ರೆಗೆ ರಾಜ್ಯದ ಮುಖ್ಯ ಮಂತ್ರಿಗಳು ಆಗಮಿಸುವ (ಮೊದಲ ಪುಟದಿಂದ) ಎಂದು ವಿವರಿಸಿದರು..ತೀರ್ಥ ಕುಂಡಿಕೆಯ ಬಳಿಯಲ್ಲಿ ಶ್ರೀ ಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಅರ್ಚಕರ ಹೊರತು ತಕ್ಕರ ಸಹಿತ ಯಾರಿಗೂ ನಿಲ್ಲುವ ಅವಕಾಶವಿರುವದಿಲ್ಲ ಎಂದು ತಮ್ಮಯ್ಯ ವಿವರಿಸಿದರು.

ತಿಂಗಳು ಅನ್ನದಾನ: ತಾ. 17 ರಂದು ತೀರ್ಥೋದ್ಭವ ಸಮಯದಲ್ಲಿ 20 ಸಾವಿರಕ್ಕೂ ಅಧಿಕ ಭಕ್ತರೊಂದಿಗೆ ಮುಂದಿನ 48 ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಭಕ್ತರನ್ನು ನಿರೀಕ್ಷಿಸಿ ವ್ಯವಸ್ಥೆ ರೂಪಿಸಲಾಗಿದೆ ಎಂದ ಅಧ್ಯಕ್ಷ ತಮ್ಮಯ್ಯ ಕೊಡಗು ಏಕೀಕರಣ ರಂಗ, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಂಡ್ಯ ಭಕ್ತರ ನೆರವು ಸಹಿತ ಮುಂದಿನ ಒಂದು ತಿಂಗಳು ತಲಕಾವೇರಿಯಲ್ಲಿ ಅನ್ನದಾನ ಏರ್ಪಡಿಸಲಾಗುವದು ಎಂದು ಮಾಹಿತಿಯಿತ್ತರು. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯ್ತಿ ಸಹಿತ ಕ್ಷೇತ್ರದ ಸ್ವಚ್ಛತೆ, ಪಾವಿತ್ರ್ಯತೆ ಕಾಪಾಡಲು ಸಂಘ ಸಂಸ್ಥೆಗಳು, ವಿವಿಧ ಇಲಾಖೆಗಳು ಕೈಜೋಡಿಸಿದ್ದು, ಈ ಬಾರಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ವ್ಯವಸ್ಥಿತ ಜಾತ್ರೆಗೆ ಕಾಳಜಿ ವಹಿಸಲಾಗುವದು ಎಂದರು.

ಸಪ್ತ ತೀರ್ಥಗಳ ನೆಲೆ: ಅರ್ಚಕ ಕುಟುಂಬದ ಪರವಾಗಿ ಪ್ರಸಕ್ತ ಸರದಿ ಪೂಜೆ ಸಲ್ಲಿಸುತ್ತಿರುವ ನಾರಾಯಣಾಚಾರ್ ತುಲಾ ಸಂಕ್ರಮಣದ ತಯಾರಿ ಬಗ್ಗೆ ವಿವರಿಸುತ್ತಾ ಈ ಹಿಂದಿನ ವರ್ಷಗಳಿಗಿಂತಲೂ ಪ್ರಸ್ತುತ ಸಾಲಿನಲ್ಲಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಎಲ್ಲರೂ ಕಾಳಜಿ ವಹಿಸಿರುವದಾಗಿ ತಿಳಿಸಿದರು.

ಈ ಬಾರಿ ಸಂಜೆ ತುಲಾ ಮಾಸದ ಮೇಷ ಲಗ್ನದಲ್ಲಿ ಸೂರ್ಯನು ತುಲಾ ರಾಶಿಯ ಪ್ರವೇಶÀದೊಂದಿಗೆ 6.43 ರ ಪುಣ್ಯ ಕಾಲದಲ್ಲಿ ಗಂಗೆಯು ಕಾವೇರಿಯೊಡನೆ ತೀರ್ಥ ರೂಪಿಣಿಯಾಗಿ ಆವಿರ್ಭವಿಸಿ, ಒಂದು ತಿಂಗಳ ಕಾಲ ಸಪ್ತ ತೀರ್ಥಗಳೊಡಗೂಡಿ ಇಲ್ಲಿ ನೆಲೆಸುವದಾಗಿದ್ದು, ಆ ನಂಬಿಕೆಯೊಂದಿಗೆ ಭಕ್ತರು ತಾ. 17 ರಿಂದ ಬರುವ ನ. 16 ರ ಕಿರು ಸಂಕ್ರಮಣದ ತನಕ ಪುಣ್ಯ ಸ್ನಾನಕ್ಕೆ ಕ್ಷೇತ್ರಕ್ಕೆ ಬರುತ್ತಾರೆಂದು ವಿವರಿಸಿದರು.

ಕಟ್ಟು ಪಾಡುಗಳು: ದೇವತಕ್ಕ ಕೋಡಿ ಮೋಟಯ್ಯ ಸಿದ್ಧತೆ ಬಗ್ಗೆ ಮಾಹಿತಿ ನೀಡುತ್ತ ಸೆ. 27 ರಂದು ಪತ್ತಾಯಕ್ಕೆ ಅಕ್ಕಿ ಹಾಕುವದರೊಂದಿಗೆ ನಂದಾ ದೀಪ ಬೆಳಗಿದ್ದು, ಆ ಬಳಿಕ ತುಲಾ ಸಂಕ್ರಮಣದ ಕಟ್ಟು ಪಾಡುಗಳನ್ನು ಕೊಡಗು ಸೀಮೆಗೆ ಅನ್ವಯಿಸಿ ವಿಧಿಸಲಾಗಿದೆ ಎಂದು ನೆನಪಿಸಿದರು. ಇಂದು ಅಕ್ಷಯ ಪಾತ್ರೆಯೊಂದಿಗೆ ನಂದಾದೀಪವನ್ನು ಭಾಗಮಂಡಲದಲ್ಲಿ ಬೆಳಗಿದ್ದು, ತಾ. 16 ರಂದು (ಇಂದು) ಭಂಡಾರ ಆಭರಣವನ್ನು ತಲಕಾವೇರಿಗೆ ಭಾಗಮಂಡಲದಿಂದ ಸಂಪ್ರದಾಯದಂತೆ ತರಲಾಗುವದು ಎಂದರು. ಅಲ್ಲಿಂದ ಒಂದು ತಿಂಗಳು ಕಾವೇರಿ ಮಾತೆಗೆ ವಿಶೇಷ ಅಲಂಕಾರಗಳೊಂದಿಗೆ ಪೂಜಾದಿಗಳು ಮುಂದುವರಿಯುವದಾಗಿ ನೆನಪಿಸಿದರು.

ದೇವಾಲಯ ಸಮಿತಿಯ ಕೆ.ಟಿ.ರಮೇಶ್, ಉದಿಯಂಡ ಸುಭಾಶ್, ಮೀನಾಕ್ಷಿ, ಅಧಿಕಾರಿ ಜಗದೀಶ್ ಕುಮಾರ್ ಪಾರುಪತ್ತೇಗಾರ್ ಪೊನ್ನಣ್ಣ, ಭಾಗಮಂಡಲ ತಕ್ಕ ಬಲ್ಲಡ್ಕ ಅಪ್ಪಾಜಿ ಸಹಿತ ಅರ್ಚಕ ವರ್ಗ ಸಿಬ್ಬಂದಿ ಜಾತ್ರಾ ಸಿದ್ಧತೆಯಲ್ಲಿ ತೊಡಗಿದ್ದು ಗೋಚರಿಸಿತು.

ಈ ಬಾರಿ ತಾ. 17ರಂದು ಬೆಳಿಗ್ಗೆಯಿಂದ ಸಂಜೆ ನಾಲ್ಕು ಗಂಟೆಯವರೆಗೂ ಭಕ್ತಾದಿಗಳ ವಾಹನ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು ಸಂಜೆ ನಾಲ್ಕು ಗಂಟೆ ಬಳಿಕ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು ಭಕ್ತಾದಿಗಳು ಸಹಕರಿಸುವಂತೆ ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಹಾಗೂ ಜಿಲ್ಲಾಡಳಿತ ಮನವಿ ಮಾಡಿಕೊಂಡಿವೆ.

ಒಂದು ತಿಂಗಳ ಕಾಲ ನಂದಾದೀಪ

ಭಾಗಮಂಡಲ: ಕಾವೇರಿ ಜಾತ್ರೆಗಾಗಿ ದಿನಗಣನೆ ಆರಂಭವಾಗಿದ್ದು ತಾ. 17ರ ತೀರ್ಥೋದ್ಭವಕ್ಕೆ ಸಂಬಂಧಿಸಿದಂತೆ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು ಜರುಗಿದವು.ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 10.25ಕ್ಕೆ ವೃಶ್ಚಿಕ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವ ಕಾರ್ಯಕ್ರಮ ನಡೆಯಿತು.ದೇವಾಲಯದ ಅರ್ಚಕರು ಬೆಳಿಗ್ಗೆ ವಿಶೇಷಪೂಜೆ ನೆರವೇರಿಸಿದ ಬಳಿಕ ಪವಿತ್ರ ನಂದಾದೀಪವನ್ನು ಬೆಳಗಿಸಲಾಯಿತು. ದೇವಾಲಯದಲ್ಲಿ ನಂದಾದೀಪವು ನಿರಂತರವಾಗಿ ಒಂದು ತಿಂಗಳ ಕಾಲ ಬೆಳಗಲಿದೆ.ಭಾಗಮಂಡಲ-ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ಜಾತ್ರೆ ನಡೆಯಲಿದ್ದು ಯಾವದೇ ವಿಘ್ನಗಳು ಬಾರದಂತೆ ಪ್ರಾರ್ಥಿಸಿ ನಂದಾದೀಪವನ್ನು ಬೆಳಗಿಸಲಾಯಿತು. ಬಳಿಕ ದೇವಾಲಯದಲ್ಲಿನ ಅಕ್ಷಯಪಾತ್ರೆಗೆ ಅಕ್ಕಿ ಸುರಿದು ಭಕ್ತರಿಗೆ ಪಡಿಯಕ್ಕಿ ವಿತರಿಸಲಾಯಿತು.ಭಕ್ತರು ಬೆಳೆದ ಅಕ್ಕಿಯನ್ನು ಅಕ್ಷಯಪಾತ್ರೆಗೆ ಸುರಿದು ಪಡಿಯಕ್ಕಿ ರೂಪದಲ್ಲಿ ಪ್ರಸಾದವಾಗಿ ಒಂದು ತಿಂಗಳಕಾಲ ಭಕ್ತರಿಗೆ ವಿತರಿಸಲಾಗುತ್ತದೆ.ಅಕ್ಷಯಪಾತ್ರೆಯಿಂದ ಕೊಂಡೊಯ್ದ ಅಕ್ಕಿಯಿಂದ ಸಂಪತ್ತು ವೃದ್ಧಿಸಲಿದೆ ಎಂಬ ನಂಬಿಕೆ ಭಕ್ತರದ್ದು.

ಚಿತ್ರಗಳು : ಕುಯ್ಯಮುಡಿ ಸುನಿಲ್