ವೀರಾಜಪೇಟೆ, ಅ. 15 : ದೊಡ್ಡ ಗಾತ್ರದ ವಿಷ ಜಂತುÀ ಕಣಂಜ ಕಡಿತದಿಂದ ಕೋಮಾ ಸ್ಥಿತಿಯಲ್ಲಿದ್ದ ವಿ.ಆರ್.ಪಾರ್ವತಿ (56) ಎಂಬಾಕೆ ನಿನ್ನೆ ದಿನ ಮಧ್ಯ ರಾತ್ರಿ ಸಾವನ್ನಪ್ಪಿದ್ದಾರೆ.
ತಾ. 10ರಂದು ಪಾರ್ವತಿಗೆ, ಕಣಂಜ ಮುಖಕ್ಕೆ ಹಾಗೂ ತಲೆಗೆ ಕಚ್ಚಿತ್ತು ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ವೀರಾಜಪೇಟೆ ಮಡಿಕೇರಿ ಹಾಗೂ ಮೈಸೂರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲವೆನ್ನಲಾಗಿದೆ. ಮೃತ ಪಾರ್ವತಿಯ ಪತಿ ರಾಮಣ್ಣ ಇಲ್ಲಿನ ಗ್ರಾಮಾಂತರ ಪೊಲೀಸರಿಗೂ ದೂರು ನೀಡಿದ್ದಾರೆ.