ಸೋಮವಾರಪೇಟೆ, ಅ. 15: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿಯನ್ನು ಅತೀವೃಷ್ಟಿ ಪೀಡಿತ ಗ್ರಾ.ಪಂ. ಎಂದು ಘೋಷಿಸಿ ಸರ್ಕಾರದ ಯೋಜನೆಯಡಿ ಪರಿಹಾರ ಒದಗಿಸಬೇಕು. ಈ ವ್ಯಾಪ್ತಿಯಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಭೂಗರ್ಭ ಶಾಸ್ತ್ರ ವಿಜ್ಞಾನಿಗಳಿಂದ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಕೇರಿ, ಕಿರಗಂದೂರು, ಬಿಳಿಗೇರಿ ಗ್ರಾಮಗಳಲ್ಲಿ ಪ್ರಸಕ್ತ ವರ್ಷದ ಆಗಸ್ಟ್‍ನಲ್ಲಿ ಭಾರೀ ಮಳೆಯಾಗಿದ್ದು, ಅತೀವೃಷ್ಟಿಗೆ ಕೃಷಿ ಫಸಲು ಸಂಪೂರ್ಣ ನಷ್ಟಗೊಂಡಿದ್ದರೆ, ಹಲವೆಡೆ ಭೂಕುಸಿತದಿಂದ ತೋಟಗಳೇ ಕಣ್ಮರೆಯಾಗಿವೆ. ಇದರಿಂದಾಗಿ ಗ್ರಾ.ಪಂ. ವ್ಯಾಪ್ತಿಯ ಕೃಷಿಕರು ಮತ್ತು ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಕಿರಗಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವೆಡೆ ಭೂಕುಸಿತ ಉಂಟಾಗಿದ್ದು, ಕೆಲವೆಡೆ ಭೂಮಿಯಲ್ಲಿ ಬಿರುಕು ಮೂಡಿದೆ. ತಕ್ಷಣ ಭೂಗರ್ಭ ಶಾಸ್ತ್ರದ ಹಿರಿಯ ವಿಜ್ಞಾನಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಬೇಕು. ಮಕ್ಕಳಗುಡಿ ಬೆಟ್ಟದ ಕೆಳಭಾಗದಲ್ಲಿ ಭೂಕುಸಿತಗೊಂಡಿರುವ ಕೆಳಗಳ್ಳಿ ಕುಟುಂಬಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ತಾಕೇರಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಪೊನ್ನಪ್ಪ ಅವರು ತಾಲೂಕು ತಹಶೀಲ್ದಾರ್‍ರನ್ನು ಒತ್ತಾಯಿಸಿದರು.

ತಾಕೇರಿ ಗ್ರಾಮದ ಕುರವುಮೊಟ್ಟೆ

ಕಣ್ಮರೆಯಾಗಿವೆ. ಇದರಿಂದಾಗಿ ಗ್ರಾ.ಪಂ. ವ್ಯಾಪ್ತಿಯ ಕೃಷಿಕರು ಮತ್ತು ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಕಿರಗಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವೆಡೆ ಭೂಕುಸಿತ ಉಂಟಾಗಿದ್ದು, ಕೆಲವೆಡೆ ಭೂಮಿಯಲ್ಲಿ ಬಿರುಕು ಮೂಡಿದೆ. ತಕ್ಷಣ ಭೂಗರ್ಭ ಶಾಸ್ತ್ರದ ಹಿರಿಯ ವಿಜ್ಞಾನಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಬೇಕು. ಮಕ್ಕಳಗುಡಿ ಬೆಟ್ಟದ ಕೆಳಭಾಗದಲ್ಲಿ ಭೂಕುಸಿತಗೊಂಡಿರುವ ಕೆಳಗಳ್ಳಿ ಕುಟುಂಬಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ತಾಕೇರಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಪೊನ್ನಪ್ಪ ಅವರು ತಾಲೂಕು ತಹಶೀಲ್ದಾರ್‍ರನ್ನು ಒತ್ತಾಯಿಸಿದರು.

ತಾಕೇರಿ ಗ್ರಾಮದ ಕುರವುಮೊಟ್ಟೆ ಗ್ರಾ.ಪಂ. ಆವರಣದಲ್ಲಿ ಜನ ಸಂಪರ್ಕ ಸಭೆ ನಡೆಸಬೇಕು. ಅತೀವೃಷ್ಟಿಯಿಂದ ಹಾನಿಗೀಡಾಗಿರುವ ಕೃಷಿ, ಸಾರ್ವಜನಿಕ ಆಸ್ತಿಪಾಸ್ತಿಗಳ ಬಗ್ಗೆ ಸರ್ವೆ ನಡೆಸಬೇಕು. ರಸ್ತೆ ಕಾಮಗಾರಿಗಳನ್ನು ತಕ್ಷಣ ಕೈಗೆತ್ತಿಕೊಳ್ಳ ಬೇಕು ಎಂದು ತಹಶೀಲ್ದಾರ್ ಮಹೇಶ್ ಅವರನ್ನು ಒತ್ತಾಯಿಸಿದರು.

ಸಾರ್ವಜನಿಕರಿಂದ ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಹೇಶ್ ಮಾತನಾಡಿ, ಈಗಾಗಲೇ ಗ್ರಾ.ಪಂ.ನ ಮೂರು ಗ್ರಾಮಗಳನ್ನು ಸರ್ವೆ ಕಾರ್ಯಕ್ಕೆ ಸೇರಿಸಲಾಗಿದೆ. ಮುಂದಿನ ನವೆಂಬರ್ ಮೊದಲ ವಾರದಲ್ಲಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗುವದು. ಭೂಮಿ ಬಿರುಕು ಬಿಟ್ಟಿರುವದನ್ನು ತಜ್ಞರಿಂದ ಪರಿಶೀಲನೆ ನಡೆಸಲಾಗುವದು ಎಂದು ಭರವಸೆ ನೀಡಿದರು.

ನವೆಂಬರ್ ಮೊದಲನೇ ವಾರದಲ್ಲಿ ಸಭೆ ನಡೆಸದಿದ್ದರೆ, ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ಪ್ರತಿಭಟನೆಯಲ್ಲಿದ್ದ ತಾ.ಪಂ. ಸದಸ್ಯ ಬಿ.ಬಿ. ಸತೀಶ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕಿರಗಂದೂರು ಗ್ರಾ.ಪಂ. ಉಪಾಧ್ಯಕ್ಷ ಸುರೇಂದ್ರ, ಸದಸ್ಯ ಭರತ್, ತಾಕೇರಿ ಗ್ರಾಮಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಸುಮಂತ್, ಕಿರಗಂದೂರಿನ ಸುಧೀರ್, ಐಗೂರು ಗ್ರಾ.ಪಂ. ಅಧ್ಯಕ್ಷ ಚಂಗಪ್ಪ, ಬಿಳಿಗೇರಿಯ ಗಾಂಧಿ, ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಮುದ್ದಪ್ಪ, ತಾಕೇರಿ ರಘು, ರಾಜೇಶ್, ಕೆ.ಎಂ. ಲೋಕೇಶ್ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಭಾಗವಹಿಸಿದ್ದರು.