ಸೋಮವಾರಪೇಟೆ, ಅ.13: ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾಗಿ ಅಶ್ವಿನಿ ಕೃಷ್ಣಕಾಂತ್, ಕಾರ್ಯದರ್ಶಿಯಾಗಿ ಬಿ.ಬಿ.ಆದರ್ಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಕೆ.ಆರ್.ಚಂದ್ರಿಕಾ, ಎಚ್.ಕೆ.ಮಹೇಶ್, ಖಜಾಂಚಿಯಾಗಿ ಮೀರಾ ರಾಜೇಂದ್ರ ಅವರುಗಳನ್ನು ನೇಮಕಮಾಡಲಾಗಿದೆ. ಮಹಿಳಾ ಸಮಾಜದಲ್ಲಿ ಇತ್ತೀಚೆಗೆ ನಡೆದ ವಿಶೇಷ ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.