ಮಡಿಕೇರಿ, ಅ. 13: ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ, ಕೂರ್ಗ್ ವೆಲ್ನೆಸ್ ಫೌಂಡೇಷನ್, ಕಾವೇರಿ ಸೇನೆ, ಆರ್ಮರ್ ಆಫ್ ಕೇರ್ ಹಾಗೂs ಶ್ನೇಡರ್ ಕಂಪೆÀನಿ ವತಿಯಿಂದ ಸಂತ್ರಸ್ತರಿಗೆ ಸೋಲಾರ್ ದೀಪಗಳನ್ನು ಇಂದು ಇಲ್ಲಿನ ಚರ್ಚ್ಸೈಡ್ ಸಭಾಂಗಣದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಫೋರಂನ ಕಾರ್ಯದರ್ಶಿ ಉಳ್ಳಿಯಡ ಎಂ. ಪೂವಯ್ಯ, ಸಂಚಾಲಕ ಮೇಜರ್ ನಂಜಪ್ಪ (ನಿ), ಕಾವೇರಿ ಸೇನೆಯ ಸಂಚಾಲಕ ರವಿ ಚಂಗಪ್ಪ sಸೇರಿದಂತೆ ಶ್ನೇಡರ್ ಕಂಪನಿಯ ಮುಖ್ಯಸ್ಥರಿದ್ದರು. ನೆರೆದಿದ್ದ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದ ಪೂವಯ್ಯ ಅವರು, “ಯಾರೂ ತಮ್ಮ ಮೂಲಸ್ಥಾನವನ್ನು ತೊರೆದು ಹೋಗಬೇಡಿ. ಭರವಸೆ ಕಳೆದುಕೊಳ್ಳದಿರಿ, ಇದೆಲ್ಲ್ಲ ಒಂದು ಸಮಯದ ಹಾಗೂ ದೇವರ ಪರೀಕ್ಷೆ. ಸರಕಾರ ನಿಮ್ಮ ಜೊತೆಗಿದೆ,” ಎಂದು ಸಂತ್ರಸ್ತರಲ್ಲಿ ಭರವಸೆ ತುಂಬಿದರು.
ಮೇಜರ್ ನಂದ ಅವರು ಮಾತನಾಡಿ, “ಬೆಂಗಳೂರಿನ ಹಾಗೂ ಕೊಡಗಿನ ಮಾಜಿ ಸೇನಾ ಪುರುಷರು ಹಲವಾರು ರೀತಿಯಲ್ಲಿ ಸಂತ್ರಸ್ತರ ನೆರವಿಗೆ ಇಳಿದಿದ್ದಾರೆ. ‘ವಿಶ್ವ ಝೊರೊಸ್ಟ್ರಿಯನ್ ಟ್ರಸ್ಟ್’ ನಿಂದ ಹಲವು ರೀತಿಯ ನೆರವು ಹರಿದು ಬಂದಿದೆಯಲ್ಲದೆ, sಶ್ನೇಡರ್ ಕಂಪನಿಯಿಂದ 80 ಸೋಲಾರ್ ದೀಪಗಳನ್ನು ನಾವು ಈಗ ವಿತರಿಸಲಿದ್ದೇವೆ. ಯಾರೂ ಭರವಸೆ ಕಳೆದುಕೊಳ್ಳಬೇಡಿ. ನಾವೂ ಪ್ರಕೃತಿಯನ್ನು ಚೂರುಮಾಡಿದ್ದೇವೆ. ಆದರೆ ಈ ವಿಕೋಪ ಪದೇ ಪದೇ ಬರುವದಿಲ್ಲ. ನಿಮ್ಮೆಲ್ಲರ ಜೀವನ ಕ್ರಮೇಣ ಸುಧಾರಿಸಿಕೊಳ್ಳುತ್ತದೆ. ಅದಕ್ಕೆ ನಾವೆಲ್ಲರು ಸಹಾಯ ಮಾಡುತ್ತೇವೆ. ದಯವಿಟ್ಟು ತಮ್ಮ ಆಸ್ತಿಗಳನ್ನು ಮಾರಿ ಜಿಲ್ಲೆಯನ್ನು ತೊರೆಯದಿರಿ,” ಎಂದರು.
ಶ್ನೇಡರ್ ಕಂಪನಿ ಹಲವಾರು ಹಳ್ಳಿಗಳಿಗೆ ತೆರಳಿ ಸೋಲಾರ್ ಲ್ಯಾಂಪ್ಗಳನ್ನು ವಿತರಿಸಿದ್ದಲ್ಲದೆ ಕೊಡಗಿನ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದೆ ಎಂದು ಶ್ನೇಡರ್ ಕಂಪನಿಯ ಮುಖ್ಯಸ್ಥರು ತಿಳಿಸಿದರು. ಈ ಸಂದರ್ಭ ಸೋಲಾರ್ ದೀಪಗಳನ್ನು ಸಂತ್ರಸ್ತರಿಗೆ ವಿತರಿಸಲಾಯಿತು.