ಸೋಮವಾರಪೇಟೆ, ಅ. 13: ಕೂಡಿಗೆ ಡಯಟ್‍ನಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಇಲ್ಲಿನ ಜ್ಞಾನವಿಕಾಸ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

‘ಸಾರಿಗೆ ಮತ್ತು ಸಂಪರ್ಕ’ ವಿಷಯ ಬಗ್ಗೆ ಜಿ.ವಿ. ಕೌಶಿಕ್ ಮತ್ತು ಆರ್.ಆರ್. ರಿತೇಶ್‍ಲಾಲ್, ‘ತ್ಯಾಜ್ಯ ನಿರ್ವಹಣೆ’ ವಿಷಯದಲ್ಲಿ ಬಿ.ಎ. ಐಸಿರಿ ಮತ್ತು ಆರ್.ಸಿ. ಜ್ಯೋತಿ ಅವರುಗಳು ಪ್ರಥಮ ಸ್ಥಾನ ಪಡೆದು ಗದಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇದರೊಂದಿಗೆ ‘ಆರೋಗ್ಯ ಮತ್ತು ನೈರ್ಮಲ್ಯ’ ವಿಷಯದಲ್ಲಿನ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಎಲ್. ಪ್ರೇಕ್ಷಿತ ಮತ್ತು ಬಿ.ಎಂ. ಪರ್ವ ಅವರುಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.