ಮಡಿಕೇರಿ, ಅ. 13: ಮಂಗಳೂರು ವಿಶ್ವವಿದ್ಯಾನಿಲಯ ದೂರಶಿಕ್ಷಣದ ಬಿಎಡ್ ಕೋರ್ಸ್ ಸೇರಿದಂತೆ ಇನ್ನೂ 3 ಕೋರ್ಸ್ ಗಳಿಗೆ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ) ಮಾನ್ಯತೆ ನೀಡಿದೆ.
ಇದರೊಂದಿಗೆ ವಿಶ್ವವಿದ್ಯಾ ನಿಲಯದ 13 ಕೋರ್ಸುಗಳಿಗೆ ಯುಜಿಸಿ ಮಾನ್ಯತೆ ನೀಡಿದಂತಾಗಿದೆ. ಯುಜಿಸಿ ಮಂಗಳೂರು ವಿಶ್ವವಿದ್ಯಾನಿಲಯದ 10 ಕೋರ್ಸುಗಳಿಗೆ ಆಗಸ್ಟ್‍ನಲ್ಲಿ ಮಾನ್ಯತೆ ನೀಡಿತ್ತು. ಯುಜಿಸಿಯಲ್ಲಿ ಸೆಪ್ಟೆಂಬರ್ 27 ರಂದು ನಡೆದ ಸಭೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬಿಇಡಿ, ಬಿಬಿಎ, ಎಂಬಿಎ (ಟೂರಿಸಂ) ಕೋರ್ಸುಗಳಿಗೆ ಮಾನ್ಯತೆ ನೀಡುವ ನಿರ್ಧಾರ ಕೈಗೊಂಡು ಅಕ್ಟೋಬರ್ 3 ರಂದು ಯುಜಿಸಿ ತನ್ನ ವೆಬ್‍ಸೈಟ್‍ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.
ಮಂಗಳೂರು ವಿಶ್ವವಿದ್ಯಾ ನಿಲಯವು ಬ್ಯಾಚುಲರ್ ಆಫ್ ಆಟ್ರ್ಸ್ (ಬಿಎ), ಬ್ಯಾಚುಲರ್ ಆಫ್ ಕಾಮರ್ಸ್ (ಬಿಕಾಂ), ಬ್ಯಾಚುಲರ್ ಆಫ್ ಬಿಸಿನೆಸ್ ಅಡ್‍ಮಿನಿಸ್ಟ್ರೇಶನ್ (ಬಿಬಿಎ), ಮಾಸ್ಟರ್ ಆಫ್ ಬಿಸಿನೆಸ್ ಅಡ್‍ಮಿನಿಸ್ಟ್ರೇಶನ್ (ಎಂಬಿಎ) (ಟೂರಿಸಂ) ಎಂಎ (ಇಂಗ್ಲೀಷ್),
ಮಂಗಳೂರು ವಿಶ್ವವಿದ್ಯಾನಿಲಯದ ಬಿಇಡಿ, ಬಿಬಿಎ, ಎಂಬಿಎ (ಟೂರಿಸಂ) ಕೋರ್ಸುಗಳಿಗೆ ಮಾನ್ಯತೆ ನೀಡುವ ನಿರ್ಧಾರ ಕೈಗೊಂಡು ಅಕ್ಟೋಬರ್ 3 ರಂದು ಯುಜಿಸಿ ತನ್ನ ವೆಬ್‍ಸೈಟ್‍ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.
ಮಂಗಳೂರು ವಿಶ್ವವಿದ್ಯಾ ನಿಲಯವು ಬ್ಯಾಚುಲರ್ ಆಫ್ ಆಟ್ರ್ಸ್ (ಬಿಎ), ಬ್ಯಾಚುಲರ್ ಆಫ್ ಕಾಮರ್ಸ್ (ಬಿಕಾಂ), ಬ್ಯಾಚುಲರ್ ಆಫ್ ಬಿಸಿನೆಸ್ ಅಡ್‍ಮಿನಿಸ್ಟ್ರೇಶನ್ (ಬಿಬಿಎ), ಮಾಸ್ಟರ್ ಆಫ್ ಬಿಸಿನೆಸ್ ಅಡ್‍ಮಿನಿಸ್ಟ್ರೇಶನ್ (ಎಂಬಿಎ) (ಟೂರಿಸಂ) ಎಂಎ (ಇಂಗ್ಲೀಷ್), ಎಂಎ (ಕನ್ನಡ), ಎಂಎ (ಹಿಂದಿ), ಎಂಎ (ಅರ್ಥಶಾಸ್ತ್ರ), ಎಂಎ (ಇತಿಹಾಸ), ಎಂಎ (ರಾಜಕೀಯ ಶಾಸ್ತ್ರ), ಎಂಎ (ಸಮಾಜಶಾಸ್ತ್ರ) ಮತ್ತು ಎಂಕಾಂ ಕೋರ್ಸುಗಳನ್ನು 2018-19ರಿಂದ ನಡೆಸಲು ಯುಜಿಸಿ ಮಾನ್ಯತೆ ನೀಡಿದೆ. ಯುಜಿಸಿ ಮಾನ್ಯತೆ ಇರುವ ಮೇಲಿನ ಕೋರ್ಸ್‍ಗಳಿಗೆ ವಿಶ್ವವಿದ್ಯಾನಿಲಯ ಈಗಾಗಲೇ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ ಹಾಗೂ ಪ್ರವೇಶಾತಿಯ ಕೊನೆಯ ದಿನಾಂಕವನ್ನು ಅಕ್ಟೋಬರ್ 1 ರಂದ ಅಕ್ಟೋಬರ್ 20, 2018ರ ತನಕ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.