ಮಡಿಕೇರಿ, ಅ. 13: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಥಿಕಲ್ ಸಮಿತಿಯನ್ನು 2017 ರಲ್ಲಿ ಸ್ಥಾಪಿಸಿ ರಚಿಸಲಾಗಿದ್ದು, ಐ.ಸಿ.ಎಂ.ಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್)ನಿಂದ ಮಾನ್ಯತೆ ಪಡೆದಿರುತ್ತಾರೆ.
ಈ ಎಥಿಕಲ್ ಸಮಿತಿಯಲ್ಲಿ ಅಧ್ಯಕ್ಷರಾಗಿ ಎ.ಸಿ ಗಣಪತಿ, ಸದಸ್ಯ ಕಾರ್ಯದರ್ಶಿಯಾಗಿ ಡಾ. ಈಶಾ ಬಿ.ಆರ್, ಸದಸ್ಯರುಗಳಾಗಿ ಡಾ. ಕಾರ್ಯಪ್ಪ ಕೆ.ಬಿ.ಡಾ. ವಿಶಾಲ್ ಕುಮಾರ್, ಡಾ. ಲೋಕೇಶ್ ಎ.ಜೆ, ಡಾ. ಪ್ರವೀಣ್ ಕುಮಾರ್ ಕೆ., ಡಾ. ಗಾಯಿತ್ರಿ ಬಿ.ಎನ್, ಬಾಲಸುಬ್ರಮಣ್ಯ, ಎ.ಎಸ್. ಹೇಮಲತ, ಟಿ.ಸಿ. ತಮ್ಮಯ್ಯ, ಫಾದರ್ ರೋಹನ್ ಎ, ಡಾ. ರೂಪೇಶ್ ಗೋಪಾಲ್, ಡಾ. ಪುರುಷೋತ್ತಮ್ ಡಿ.ಆರ್, ಡಾ. ರಾಮಚಂದ್ರ ಕಾಮತ್, ಡಾ. ನರಸಿಂಹ ರೈ ಕೆ. ಅವರನ್ನು ನೇಮಿಸಲಾಗಿದೆ.
ಈ ಸಂಸ್ಥೆಯಲ್ಲಿ ನಡೆಯುವ ಎಲ್ಲಾ ವ್ಶೆಜ್ಞಾನಿಕ ಸಂಶೋಧನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಸಂಶೋಧನೆಗಳಲ್ಲಿ ಪಾಲ್ಗೊಳ್ಳುವ ಜನರ ಸಾಮಾನ್ಯ ಹಕ್ಕು, ಸುರಕ್ಷತೆ ಹಾಗೂ ಸ್ವಾತಂತ್ರ್ಯವನ್ನು ಕಾಪಾಡುವದು ಹಾಗೂ ಸಂಶೋಧನೆಯನ್ನು ಪ್ರಾರಂಭಿಸಿದಂದಿನಿಂದಲೂ ಅಂತಿಮವರೆಗೆ ಯಾವದೇ ರೀತಿಯ ಬದಲಾವಣೆಯನ್ನು ಹೊಂದದೆ ನಿಯಮಾನುಸಾರ ನಡೆಯುವಂತೆ ನೋಡಿಕೊಳ್ಳುವದು. ಈ ಸಮಿತಿಯ ಮುಖ್ಯ ಹಾಗೂ ಆದ್ಯ ಕರ್ತವ್ಯ ಜವಾಬ್ದಾರಿಯಾಗಿದೆ ಎಂದು ಡೀನ್ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ಉಚಿತ ವೃತ್ತಿ ಕೌಶಲ್ಯ ತರಬೇತಿ
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ವೃತ್ತಿ ಕೌಶಲ್ಯ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇಲ್ಲಿ ಕಂಪ್ಯೂಟರ್, ಟೈಲರಿಂಗ್, ಬ್ಯೂಟೀಷಿಯನ್, ಬ್ಯಾಂಕಿಂಗ್ ಪರೀಕ್ಷೆ, ಇನ್ನಿತರ ತರಬೇತಿಗಳು ಪ್ರಾರಂಭಗೊಂಡಿದೆ.
ಎಲ್ಲಾ ತರಬೇತಿಗಳಿಗೂ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುವಕ ಯುವತಿಯರಲ್ಲಿ ಪ್ರತ್ಯೇಕತೆಯಿಲ್ಲದೇ ಎಲ್ಲರೂ ಸಮ ಪ್ರಮಾಣದಲ್ಲಿ ಟೈಲರಿಂಗ್, ಬ್ಯೂಟಿಷಿಯನ್ ತರಬೇತಿ ಪಡೆಯುತ್ತಿದ್ದಾರೆ. ಒಂದು ವರ್ಷದ ಈ ತರಬೇತಿ ಪಡೆದ ನಂತರ ಬೇರೆ ತರಬೇತಿಗೂ ವಿದ್ಯಾರ್ಥಿಗಳು ಸೇರಿಕೊಳ್ಳಬಹುದು.
ತಮ್ಮ ತಮ್ಮ ಬಟ್ಟೆಯನ್ನು ತಾವೇ ಹೊಲಿದುಕೊಳ್ಳಬಹುದು. ಅಥವಾ ರೆಡಿಮೇಡ್ ಬಟ್ಟೆಗಳನ್ನು ತಮಗೆ ಬೇಕಾದಂತೆ ಬದಲಾಯಿಸಿ ವಿನ್ಯಾಸಗೊಳಿಸಿಕೊಳ್ಳಬಹುದು. ಇನ್ನು ಬ್ಯೂಟಿಷಿಯನ್ ತರಬೇತಿಯಿಂದ ವಿದ್ಯಾರ್ಥಿಗಳಲ್ಲಿ ಡ್ರೆಸ್‍ಸೆನ್ಸ್, ಟೈಲರಿಂಗ್, ಬ್ಯೂಟಿಷಿಯನ್ ಕೋರ್ಸುಗಳು ಜೀವನೋಪಾಯಕ್ಕೂ ಭದ್ರ ಬುನಾದಿಯನ್ನೂ ಹಾಕಿಕೊಡುತ್ತದೆ. ಹಾಗಾಗಿ ಸದ್ಯಕ್ಕೆ ಈ ರೀತಿಯ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಬದುಕು ಆತ್ಮಸ್ಥೈರ್ಯ ತುಂಬಿದೆ. ಯುಜಿಸಿ ವತಿಯಿಂದ ಈ ಕೌಶಲ್ಯಾಭಿವೃದ್ಧಿ ಯೋಜನೆಯನ್ನು ಆರಂಭಿಸಲಾಗಿದ್ದು, ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.