ಮಡಿಕೇರಿ, ಅ. 10: ಬಹುಶಃ ಪ್ರಥಮ ಬಾರಿ ಎಂಬಂತೆ ಇಲ್ಲಿನ ಟಿಟೂಸ್ ನರ್ಸರಿ ಶಾಲೆಯಲ್ಲಿ ಇತ್ತೀಚೆಗೆ ಪುಟ್ಟ ಮಕ್ಕಳ ಅಜ್ಜಿಯರ ದಿನ ಆಚರಿಸಲಾಯಿತು.
ಇಂದು ವಯೋವೃದ್ಧರಾದರೂ ಅವರು ಪುಟ್ಟ ಮಕ್ಕಳಿದ್ದಾಗ ಕಲಿತ ‘ನಾಯಿಮರಿ ನಾಯಿಮರಿ ತಿಂಡಿ ಬೇಕೆ’ ಇತ್ಯಾದಿ ಕನ್ನಡ, ಇಂಗ್ಲೀಷ್ ಹಾಡುಗಳು, ಜೋಗುಳ ಗೀತೆಗಳು, ಮೂಸಿಕಲ್ ಚೇರ್, ಮಾತು ಹೀಗೆ ನರ್ಸರಿ ತುಂಬ ಹಾಡು, ನಗು, ಕುಣಿತ. ಜೊತೆಗಿದ್ದ ಪುಟ್ಟ ಮಕ್ಕಳು ತಾವೂ ಭಾಗವಹಿಸಿ ಶಾಲಾ ಮುಖ್ಯಸ್ಥೆ ಮೆಲಡಿ ಡಿಸಿಲ್ವ ಮತ್ತು ಅಧ್ಯಾಪಕಿ ಡಯಾನಾ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಡಯಾನಾ ಸ್ವಾಗತಿಸಿ, ಶಾಂತಿ ಶಂಕರ್ ವಂದನಾರ್ಪಣೆ ಮಾಡಿದರು.