ಸುಂಟಿಕೊಪ್ಪ, ಅ. 10: ಕೊಡಗು ಜಿಲ್ಲಾ ಮಟ್ಟದ 7 ಸ್ಪರ್ಧಾಳುಗಳ ಪ್ರಥಮ ವರ್ಷದ ಫುಟ್ಬಾಲ್ ಕೊಡಗರಹಳ್ಳಿ ಯೂತ್‍ಫಾರ್ ಜಸ್ಟೀಸ್ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
ಕೊಡಗರಹಳ್ಳಿ ನೇತಾಜಿ ಯುವಕ ಸಂಘದ ವತಿಯಿಂದ ಪ್ರಾಯೋಜಿತ ಪ್ರಥಮ ಬಾರಿಯ ಸೆವೆನ್ಸ್ ಫುಟ್ಬಾಲ್ ಪಂದ್ಯಾಟವು ಕೊಡಗರಹಳ್ಳಿ ನಾಡು ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲೆಯ ವಿವಿಧೆಡೆಯಿಂದ 24 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಅದರಲ್ಲಿ ಕೊಡಗರಹಳ್ಳಿ ಯೂತ್ ಫಾರ್ ಜಸ್ಟಿಸ್ ತಂಡ ಫೈನಲ್ ಪಂದ್ಯಾವಳಿಯಲ್ಲಿ ಮಡಿಕೇರಿ ಎಫ್‍ಎಂಸಿ ಕಾಲೇಜು ತಂಡವನ್ನು ಮಣಿಸುವ ಮೂಲಕ ಟ್ರೋಫಿ ಹಾಗೂ ರೂ. 10 ಸಾವಿರ ನಗದು ಬಹುಮಾನವನ್ನು ಪಡೆದುಕೊಂಡಿತು.
ದ್ವಿತೀಯ ಸ್ಥಾನ ಪಡೆದ ಎಫ್‍ಎಂಸಿ ತಂಡಕ್ಕೆ ಟ್ರೋಫಿ ಹಾಗೂ ರೂ. 6 ಸಾವಿರ ನಗದು ಬಹುಮಾನವನ್ನು ನೀಡಲಾಯಿತು.
ಕ್ರೀಡಾಕೂಟವನ್ನು ನೇತಾಜಿ ಯುವಕ ಸಂಘದ ಕಿರಿಯ ಸದಸ್ಯರುಗಳಾದ ದಿನೇಶ್, ಪುನೀತ್, ನಾರಾಯಣ ಮತ್ತು ಸಹ ಸದಸ್ಯರು ಹಿರಿಯ ಆಟಗಾರ ಹಾಗೂ ಫುಟ್ಬಾಲ್ ರಾಜ್ಯ ನಿರ್ದೇಶಕ ಪಿ.ಕೆ. ಜಗದೀಶ್ ಅವರ ಸಲಹೆ ಮೇರೆ ಈ ಭಾಗದ ದಾನಿಗಳ ಸಹಕಾರದೊಂದಿಗೆ ಪ್ರಥಮ ಬಾರಿಗೆ ಕೊಡಗರಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ನೇತಾಜಿ ಯುವಕ ಸಂಘದ ಅಧ್ಯಕ್ಷ ಡಾ. ಶಶಿಕಾಂತರೈ ವಹಿಸಿದ್ದರು. ಪಾಲಿಬೆಟ್ಟ ಉತ್ತಮ ಶಿಸ್ತಿನ ತಂಡ, ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಅಜಿತ್, ಉತ್ತಮ ಗೋಲ್ ಕೀಪರ್, ಉತ್ತಮ ಆಟಗಾರ ಸೇರಿದಂತೆ ಇನ್ನಿತರ ಪ್ರಶಸ್ತಿಗಳನ್ನು ನೀಡಲಾಯಿತು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ವಿಎಸ್‍ಎಸ್‍ಎನ್ ಬ್ಯಾಂಕ್ ಸದಸ್ಯ ಕೊಡಗರಹಳ್ಳಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿಗಳಾದ ಕೆ.ಎಸ್. ಮಂಜುನಾಥ್, ಕೊಡಗರಹಳ್ಳಿ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷೆ ಮೀನಾ ಸೋಮಯ್ಯ, ಟ್ರೋಫಿ ದಾನಿಗಳಾದ ಆರ್‍ಎಫ್‍ಓ ಚಂಗಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಪ್ರೇಮ, ಜೆ.ಎಂ. ಕುಂಞಪ್ಪ, ಎ.ಆರ್. ಚಂದ್ರಶೇಖರ್, ವಿಎಸ್‍ಎಸ್‍ಎನ್ ನಿರ್ದೇಶಕ ಕುಟ್ಟಪ್ಪ, ನೇತಾಜಿ ಯುವಕ ಸಂಘದ ಹಿರಿಯ ಆಟಗಾರ ಧನಂಜಯ, ಸಿ.ಸಿ. ನಾರಾಯಣ, ವಾಸು, ಫೆಲಿಕ್ಸ್ ಪಿಂಠೋ, ಕರ್ನಲ್ ಉತ್ತಯ್ಯ ಮತ್ತಿತರರು ಇದ್ದರು.