ಕುಶಾಲನಗರ, ಅ. 10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನದಲ್ಲಿ ತಾಂತ್ರಿಕ ತರಬೇತಿ ಸಹಾಯಕರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಕುಶಾಲನಗರದ ಕಾವೇರಿ ಕೋಚಿಂಗ್ ಸೆಂಟರ್‍ನಲ್ಲಿ ನಡೆದ ಕಾರ್ಯಗಾರವನ್ನು ಉದ್ಯಮಿ ಎಸ್.ಕೆ. ಸತೀಶ್ ಉದ್ಘಾಟಿಸಿ, ಸಂಘಗಳು ಬಹಳ ಶಿಸ್ತು ಹಾಗೂ ನಿಯಮಕ್ಕೆ ಬದ್ಧವಾಗಿ ಬಹಳ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವದರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೇಶ್, ಕ್ಷೇತ್ರದ ಹಿನ್ನೆಲೆ ಹಾಗೂ ಕಾರ್ಯಾಗಾರದ ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ತರಬೇತಿ ಸಹಾಯಕರಿಗೆ ಮಾಹಿತಿ ಒದಗಿಸಿದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕಿನ ಯೋಜನಾಧಿಕಾರಿ ಸದಾಶಿವ ಹಾಗೂ ಸೋಮವಾರಪೇಟೆ ಯೋಜನಾಧಿಕಾರಿ ವೈ.ಪ್ರಕಾಶ್, ತರಬೇತುದಾರ ಶಿವಕುಮಾರ್, ತಾಲೂಕಿನ ಕೃಷಿ ಅಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸಮನ್ವಯ ಅಧಿಕಾರಿಗಳು, ಆಂತರಿಕ ಲೆಕ್ಕ ಪರಿಶೋಧಕರು, ಜಿಲ್ಲಾ ಐಟಿ ಪ್ರಬಂಧಕರು, ಕುಶಾಲನಗರ ವಲಯ ಮೇಲ್ವಿಚಾರಕ ಹರೀಶ್, ಸೇವಾ ಪ್ರತಿನಿಧಿಗಳಾದ ಯಶೋಧ, ಜಯಲಕ್ಷ್ಮಿ ಇದ್ದರು.

ಕಾರ್ಯಾಗಾರದಲ್ಲಿ 50 ಮಂದಿ ತಾಂತ್ರಿಕ ತರಬೇತಿ ಸಹಾಯಕರು ಪಾಲ್ಗೊಂಡಿದ್ದರು.