ಗೋಣಿಕೊಪ್ಪ ವರದಿ, ಅ. 10 : ಕಾವೇರಿ ದಸರಾ ಸಮಿತಿ ವತಿಯಿಂದ ನಡೆಯುತ್ತಿರುವ ಗೋಣಿಕೊಪ್ಪ ದಸರಾ ನವರಾತ್ರಿ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 16 ರಂದು ಮಹಿಳೆಯರಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ 5 ನೇ ವರ್ಷದ ಮಹಿಳಾ ದಸರಾ ಆಚರಿಸಲಾಗುವದು ಎಂದು ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಎಂ. ಮಂಜುಳ ಹೇಳಿದರು.

ಪಾಕೃತಿಕ ವಿಕೋಪದ ನೋವಿನ ನಡುವೆ ಸರಳ ದಸರಾ ಆಚರಣೆಯಂತೆ ಸರ್ಕಾರ ಅನುದಾನ ಕೂಡ ಘೋಷಣೆ ಮಾಡಿದೆ. ಕಾವೇರಿ ದಸರಾ ಸಮಿತಿ ಆಚರಿಸಲಿರುವ 5 ದಿನಗಳ ಸಂಜೆಯ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅವಕಾಶ ನೀಡಿದೆ. ಇದರಂತೆ ಮಹಿಳೆಯರಿಗೆ ಒಂದಷ್ಟು ಸಾಂಸ್ಕøತಿಕ ಸ್ಪರ್ಧೆ ಏರ್ಪಡಿಸಿ ಒಂದಷ್ಟು ಹಣವನ್ನು ಭೂಕುಸಿತದಲ್ಲಿ ನೊಂದ ಮಹಿಳೆಯರ ಭವಿಷ್ಯ ಕಟ್ಟಿಕೊಳ್ಳಲು ಸಹಾಯ ಮಾಡಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗೋಣಿಕೊಪ್ಪ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿನ ಕಾವೇರಿ ಕಲಾವೇದಿಕೆಯಲ್ಲಿ ಸಂಜೆ 6 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. ಭೂಕುಸಿತದಲ್ಲಿ ನೊಂದ ಮಹಿಳೆಯರಿಂದಲೇ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಚಿಂತನೆ ನಡೆಸಲಾಗಿದೆ. ಸ್ಪರ್ಧಿಗಳಿಗೆ ಹಣದ ರೂಪದಲ್ಲಿ ಬಹುಮಾನ ನೀಡಲಾಗುವದು. ವಿಜೇತರುಗಳು ಅವರ ಬಹುಮಾನದ ಹಣವನ್ನು ಅವರ ಇಚ್ಚೆಯಂತೆ ಭೂಕುಸಿತದಲ್ಲಿ ನೊಂದ ಮಹಿಳೆಯರಿಗೆ ನೀಡಲು ಅವಕಾಶ ಕಲ್ಪಿಸಲಾಗುವದು. ವೆಚ್ಚವನ್ನು ಕಡಿಮೆ ಮಾಡಿ ನೊಂದವರತ್ತ ಸಹಾಯ ಹಸ್ತ ನೀಡಲು ಮುಂದಾಗಿದ್ದೇವೆ ಎಂದರು.

ಕಾರ್ಯದರ್ಶಿ ಕಡೇಮಾಡ ಕುಸುಮ ಜೋಯಪ್ಪ ಮಾತನಾಡಿ, ಸುಮಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕೊಡಗಿನ ಪ್ರಾಕೃತಿಕ ಸಂಪತ್ತು ಉಳಿಸಿ ಪೋಷಿಸಲು ಕೊಡಗು ಪರಿಸರ ರಕ್ಷಣೆಯಲ್ಲಿ ನಮ್ಮ ಪಾತ್ರ ಅಂದು-ಇಂದು ಎಂಬ ವಿಷಯದಲ್ಲಿ ಚರ್ಚೆ ನಡೆಯಲಿದೆ. 4 ಜನರಿಗಿಂತ ಮೇಲ್ಪಟ್ಟ ತಂಡಕ್ಕೆ ನೃತ್ಯ ಸ್ಪರ್ಧೆ, ಜಾನಪದ ಗೀತೆ, ಮಿಸಸ್ ಗೋಣಿಕೊಪ್ಪ, ಛದ್ಮವೇಷ, ಸೀರೆ ನಿಖರ ಬೆಲೆ, ಪಿಕ್ ಅಯಿಂಡ್ ಆಕ್ಟ್ ಸ್ಪರ್ಧೆ ನಡೆಯಲಿದೆ ಎಂದರು. ಹೆಚ್ಚಿನ ಮಾಹಿತಿಗೆ 9448721017, 8762604370, 8971612050 ಸಂಪರ್ಕಿಸಬಹುದಾಗಿದೆ.

ಗೋಷ್ಠಿಯಲ್ಲಿ ಮಹಿಳಾ ದಸರಾ ಗೌರವ ಅಧ್ಯಕ್ಷೆ ಪ್ರವಿಮೊಣ್ಣಪ್ಪ, ಸಹಕಾರ್ಯದರ್ಶಿ ಯಾಸ್ಮಿನ್, ಖಜಾಂಜಿ ಚೇಂದೀರ ಪ್ರಭಾವತಿ ಉಪಸ್ಥಿತರಿದ್ದರು.