ಮಡಿಕೇರಿ, ಅ. 10: ಅತಿವೃಷ್ಟಿಯಿಂದ ಕೊಡಗು ಸಂಕಷ್ಟದಲ್ಲಿರುವದರಿಂದ ಪ್ರಸಕ್ತ ಸಾಲಿನ ಕೊಡವ ನಮ್ಮೆಯನ್ನು ಮುಂದೂಡಿ ಎಲ್ಲಾ ಕೊಡವ ಸಮಾಜಗಳು ತಲಾ ರೂ. 50 ಸಾವಿರವನ್ನು ನೀಡುವದರೊಂದಿಗೆ ಈ ಹಣವನ್ನು ಸಂತ್ರಸ್ತರಿಗೆ ವಿತರಿಸಲು ಕೊಡವ ಸಮಾಜಗಳ ಒಕ್ಕೂಟ ನಿರ್ಧರಿಸಿದೆ.ಬಾಳುಗೋಡಿನಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಪ್ರಮುಖರು ಮಾತನಾಡಿ ಪ್ರಾಕೃತಿಕ ವಿಕೋಪದಿಂದ ಜಿಲ್ಲೆ ಅನುಭವಿಸುತ್ತಿರುವ ಕಷ್ಟ ನಷ್ಟಗಳ ಬಗ್ಗೆ ವಿವರಿಸಿದರು. ಸಂತ್ರಸ್ತರು ಸಂಕಷ್ಟದಲ್ಲಿರುವದರಿಂದ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಕೊಡವ ನಮ್ಮೆಯನ್ನು ಪ್ರಸ್ತುತ ವರ್ಷ ಕೈಬಿಟ್ಟು ನಮ್ಮೆಗಾಗಿ ಸಂಗ್ರಹವಾಗುತ್ತಿದ್ದ ಸಂಕಷ್ಟದಲ್ಲಿರುವದರಿಂದ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಕೊಡವ ನಮ್ಮೆಯನ್ನು ಪ್ರಸ್ತುತ ವರ್ಷ ಕೈಬಿಟ್ಟು ನಮ್ಮೆಗಾಗಿ ಸಂಗ್ರಹವಾಗುತ್ತಿದ್ದ ಕುಟುಂಬಸ್ಥರು ನಡೆಸಬೇಕಾಗಿತ್ತು. ಆದರೆ ಅತಿವೃಷ್ಟಿಯ ಹಿನ್ನೆಲೆಯಲ್ಲಿ ಇದನ್ನು ಕೂಡ ಮುಂದೂಡಲಾಗಿದ್ದು, ಒಕ್ಕೂಟ

(ಮೊದಲ ಪುಟದಿಂದ) ಈ ನಿರ್ಧಾರಕ್ಕೆ ಸಮ್ಮತಿಯನ್ನು ವ್ಯಕ್ತಪಡಿಸಿತು.

ಕೊಡವ ಸಮಾಜಗಳ ಮೂಲಕ ಸಂಗ್ರಹವಾಗುವÀ ಹಣವನ್ನು ಕೊಡವ ಸಮಾಜಗಳ ಒಕ್ಕೂಟದ ನೇತೃತ್ವದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೀಡಲಾಗುವದು. ಒಕ್ಕೂಟ ಖುದ್ದಾಗಿ ಸ್ಥಳ ಪರಿಶೀಲಿಸಿ ನೈಜ ಸಂತ್ರಸ್ತರ ಮಾಹಿತಿ ಪಡೆದು ಪರಿಹಾರ ಕಾರ್ಯ ಕೈಗೊಳ್ಳಲಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ತಿಳಿಸಿದರು.

ಉಪಾಧ್ಯಕ್ಷ ಅಭಿಮನ್ಯು ಕುಮಾರ್, ರವಿ ಉತ್ತಪ್ಪ, ಕೆ.ಎಸ್. ದೇವಯ್ಯ, ಪೋಷಕ ಸದಸ್ಯ ಎಂ.ಸಿ. ನಾಣಯ್ಯ, ಕಾರ್ಯದರ್ಶಿ ವಾಟೇರಿರ ಶಂಕರಿಪೂವಯ್ಯ ಮತ್ತು ಎಲ್ಲಾ ಕೊಡವ ಸಮಾಜಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.