ಮಡಿಕೇರಿ, ಅ. 10: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ 88ನೇ ವರ್ಷದ ಉತ್ಸವ ಆಚರಣೆ ಸಿದ್ಧತೆ ಕೈಗೊಂಡಿದೆ ಎಂದು ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಸಿ.ಎಸ್. ರಂಜಿತ್ ಕುಮಾರ್ ತಿಳಿಸಿದ್ದಾರೆ.
ಎರಡು ಟ್ರ್ಯಾಕ್ಟರ್ಗಳನ್ನು ಬಳಸಲಾಗುತ್ತಿದ್ದು, ಪೂಜಾ ಲೈಟಿಂಗ್ಸ್ ನಜೀರ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. 6 ಕಲಾಕೃತಿ ಗಳನ್ನು ಬಳಸಲಾಗುತ್ತಿದ್ದು, ಕಲಾಕೃತಿಗಳ ರಚನೆ, ಚಲನ ವಲನ, ಪ್ಲಾಟ್ಫಾರಂ ನಿರ್ಮಾಣವನ್ನು ಮಡಿಕೇರಿ ಹೇಮರಾಜು ಮತ್ತು ತಂಡದವರು ಮಾಡಲಿದ್ದಾರೆ. ಟ್ರ್ಯಾಕ್ಟರ್ ಸೆಟ್ಟಿಂಗ್ಸ್, ಧ್ವನಿವರ್ಧಕ ಹಾಗೂ ಸ್ಟುಡಿಯೋ ವ್ಯವಸ್ಥೆಯನ್ನು ಸೋಮವಾರಪೇಟೆ ಡಿಜೆ ಕ್ರಿವ್ನ ಹರ್ಷ ಒದಗಿಸಲಿದ್ದಾರೆ. ಕ್ಯಾಲಿಕಟ್ನ ವಾದ್ಯಗೋಷ್ಠಿ ಮಂಟ ಪವನ್ನು ಮುನ್ನಡೆಸಲಿದ್ದು, 8 ಲಕ್ಷ ವೆಚ್ಚದಲ್ಲಿ ಮಂಟ ಪವನ್ನು ಹೊರತರಲಾ ಗುತ್ತಿದೆ ಎಂದು ರಂಜಿತ್ ಕುಮಾರ್ ವಿವರಿಸಿದರು.
- ಉಜ್ವಲ್ ರಂಜಿತ್