ಸುಂಟಿಕೊಪ್ಪ, ಅ. 11: ಮಾದಾಪುರ ಗ್ರಾಮ ಪಂಚಾಯಿತಿ ಇಗ್ಗೋಡ್ಲು ವ್ಯಾಪ್ತಿಯಲ್ಲಿ ಆಗಸ್ಟ್‍ನಲ್ಲಿ ಸಂಭವಿಸಿದ ಅತಿವೃಷ್ಟಿ ಅನಾಹುತದಿಂದ ಸಂತ್ರಸ್ತರಾದವರಿಗೆ ಇನ್ನೂ ಸರಕಾರದಿಂದ ಪರಿಹಾರ ಸಿಗಲಿಲ್ಲ ಎಂದು ನೊಂದವರು ಅವಲತ್ತುಕೊಂಡಿದ್ದಾರೆ.

ಆಗಸ್ಟ್ 16 ರಂದು ರಾತ್ರಿ ಗುಡ್ಡಕುಸಿತ ಜಲಪ್ರಳಯಕ್ಕೆ ಇಗ್ಗೋಡ್ಲು ಪರಿಶಿಷ್ಟ ಕಾಲೋನಿ ನಿವಾಸಿಗಳ ಮನೆಗಳು ಭಾಗಶಃ ಹಾನಿಯಾಗಿದೆ. ಕಾರ್ಯಪ್ಪ, ರೆಡ್ಡಿ ಕಾಫಿ ತೋಟಗಳು ಮಣ್ಣಿನಿಂದ ಭೂ ಸಮಾಧಿಯಾಗಿದ್ದು, ಇನ್ನಿತರರ ತೋಟಗಳು ವರುಣನ ಆರ್ಭಟಕ್ಕೆ ನಾಶವಾಗಿದೆ. ಜಿಲ್ಲಾಧಿಕಾರಿಗಳು ಸಹ ಈ ಭಾಗಕ್ಕೆ ಒಮ್ಮೆ ಭೇಟಿ ನೀಡಿದ್ದರು.

ಆದರೆ ಕಂದಾಯ ಸೇರಿದಂತೆ ಕೃಷಿ, ತೋಟಗಾರಿಕೆ, ಕಾಫಿ ಮಂಡಳಿಯಿಂದ ಸೂಕ್ತ ಪರಿಹಾರ ಸಿಗಲಿಲ್ಲ ಎಂದು ಧೂಮಪ್ಪ, ಮಧು, ಪರಶು ತಿಳಿಸಿದ್ದಾರೆ.