ಮಡಿಕೇರಿ, ಅ. 11: ಇತ್ತೀಚೆಗೆ ಮುಳಿಯ ಜ್ಯುವೆಲ್ಲರಿಯವರು ಗೋಣಿಕೊಪ್ಪಲಿನ ಉಮಾಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ವೀರಾಜಪೇಟೆ ಕಾವೇರಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಣವ್ ಪಿ.ಪಿ. ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಪ್ರಾಂಶುಪಾಲ ಪಿ.ಎನ್.ವಿನೋದ್, ಮುಖ್ಯೋಪಾಧ್ಯಾಯಿನಿ ಚಿಣ್ಣಮ್ಮ ಮತ್ತು ಮಾರ್ಗದರ್ಶಿ ಶಿಕ್ಷಕಿ ಅನುಪಮ ತಿಮ್ಮಯ್ಯ ಚಿತ್ರದಲ್ಲಿದ್ದಾರೆ.