ಗೋಣಿಕೊಪ್ಪ ವರದಿ, ಅ. 11: ಸ್ತಬ್ಧಚಿತ್ರ ಮೂಲಕ ಗೋಣಿಕೊಪ್ಪ ದಸರಾದಲ್ಲಿ ಸಾಮಾಜಿಕವಾಗಿ ವಿಶೇಷ ಸಂದೇಶ ನೀಡುತ್ತಿರುವ ಸ್ತಬ್ಧಚಿತ್ರ ಮೆರವಣಿಗೆ ಕಾರ್ಯಕ್ರಮವನ್ನು ಈ ಬಾರಿ ಪ್ರದರ್ಶನ ಕಾರ್ಯಕ್ರಮವಾಗಿ ನಡೆಸಲಾಗುವದು ಎಂದು ನಾಡಹಬ್ಬ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಂಜಿತಂಡ ಪ್ರವೀಣ್ ತಿಳಿಸಿದ್ದಾರೆ.

ಪ್ರಾಕೃತಿಕ ವಿಕೋಪದಿಂದ ಸಾರ್ವಜನಿಕವಾಗಿ ಧನಸಹಾಯ ಕೇಳುವ ಪರಿಸ್ಥಿತಿಯಲ್ಲಿ ದಕ್ಷಿಣ ಕೊಡಗಿನ ಜನರು ಇಲ್ಲದ ಕಾರಣ, ಸ್ತಬ್ಧಚಿತ್ರ ಮೆರವಣಿಗೆ ಕಾರ್ಯಕ್ರಮವನ್ನು ರದ್ದು ಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಸ್ತಬ್ಧಚಿತ್ರ ಕಲಾವಿದರ ಒತ್ತಾಯದಂತೆ ಈ ಬಾರಿ ಆಚರಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ್ಯಕ್ರಮ ಆಯೋಜಿಸಲು ಕೇಳುವ ಪರಿಸ್ಥಿತಿಯಲ್ಲಿ ದಕ್ಷಿಣ ಕೊಡಗಿನ ಜನರು ಇಲ್ಲದ ಕಾರಣ, ಸ್ತಬ್ಧಚಿತ್ರ ಮೆರವಣಿಗೆ ಕಾರ್ಯಕ್ರಮವನ್ನು ರದ್ದು ಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಸ್ತಬ್ಧಚಿತ್ರ ಕಲಾವಿದರ ಒತ್ತಾಯದಂತೆ ಈ ಬಾರಿ ಆಚರಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ್ಯಕ್ರಮ ಆಯೋಜಿಸಲು ಹೆಚ್ಚಿನ ಅನುದಾನ ನೀಡಿದರೆ ಎಲ್ಲಾ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ನೀಡಲು ಚಿಂತನೆ ನಡೆಸಲಾಗಿದೆ ಎಂದರು.

ವಿಜಯದಶಮಿಯಂದು ಮಧ್ಯಾಹ್ನ ಮೆರವಣಿಗೆ ನಡೆಯಲಿದೆ. ಪಾಲ್ಗೊಳ್ಳುವವರು 9480180541, 9449813300 ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

ಗೋಷ್ಠಿಯಲ್ಲಿ ಸಮಿತಿ ಗೌರವ ಅಧ್ಯಕ್ಷ ಗೋಪಿ ಚಿಣ್ಣಪ್ಪ, ಅಧ್ಯಕ್ಷ ಅಜ್ಜಿಕುಟ್ಟೀರ ಹೃಷಿ ಕಾವೇರಪ್ಪ, ಕಾರ್ಯದರ್ಶಿ ರಂಗಸ್ವಾಮಿ, ಸದಸ್ಯರುಗಳಾದ ಮಣಿ, ಸುನಿಲ್ ಉಪಸ್ಥಿತರಿದ್ದರು.