*ಗೋಣಿಕೊಪ್ಪ, ಅ. 10: ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಅನುಮತಿಯನ್ನು ಮರು ಪರಿಶೀಲನೆಗೆ ಕೇರಳ ಸರ್ಕಾರ ಅರ್ಜಿ ಹಾಕದಿರುವ ನಿಲುವನ್ನು ಖಂಡಿಸಿ ಅಯ್ಯಪ್ಪ ನಾಮಜಪ ಯಜ್ಞ ನಡೆಸುವ ಮೂಲಕ ಪ್ರತಿಭಟಿಸಲಾಗುವದು ಎಂದು ವೀರಾಜಪೇಟೆ ತಾಲೂಕು ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತÀನಾಡಿದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಗೌರವಾಧ್ಯಕ್ಷ ಸಿ.ಕೆ. ಬೋಪಣ್ಣ, 10 ವರ್ಷಕ್ಕೆ ಮೇಲ್ಪಟ್ಟು ಮತ್ತು 50 ವರ್ಷ ಒಳಗಿರುವ ಯುವತಿಯರನ್ನು ಅಯ್ಯಪ್ಪ ದೇವಾಲಯಕ್ಕೆ ಪ್ರವೇಶಿಸುವ ಸುಪ್ರಿಂ ಕೋರ್ಟ್ ತೀರ್ಪನ್ನು ಮರು ಪರಿಶೀಲನೆ ನಡೆಸಲು ಕೇರಳ ಸರ್ಕಾರ ಮುಂದಾಗಬೇಕು ಎಂಬ ನಿಟ್ಟಿನಲ್ಲಿ ತಾ. 14 ರಂದು ಕೃಷಿ ಉತ್ಪನ್ನ ಆವರಣದಿಂದ ಸರ್ಕಾರಿ ಪ್ರೌಢ ಶಾಲಾ ಮೈದಾನದವರೆಗೆ ಅಯ್ಯಪ್ಪ ಸ್ವಾಮಿಯ ನಾಮ ಜಪಿಸುತ್ತಾ ಅಯ್ಯಪ್ಪ ಸ್ವಾಮಿ ಭಕ್ತಾದಿಗಳೊಂದಿಗೆ ಮೆರವಣಿಗೆ ನಡೆಸಿ ಪ್ರತಿಭಟಿಸಲಾಗುವದು. ಶಬರಿಮಲೆಯ ಪಾವಿತ್ರ್ಯತೆಯನ್ನು, ಆಚಾರಗಳನ್ನು, ಸಾಂಪ್ರದಾಯವನ್ನು ಉಳಿಸುವÀ ನಿಟ್ಟಿನಲ್ಲಿ ಜಾತಿ ಪಕ್ಷ ಭೇದ ಮರೆತು ಪ್ರತಿಭಟನೆಯಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು. ಅಧ್ಯಕ್ಷ ಆಲೇಮಾಡ ಸುಧೀರ್ ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಆಚಾರಕ್ಕೆ ತೊಡಕಾಗಿದೆ. ಇದನ್ನು ಪ್ರಶ್ನಿಸಿ ಕೇರಳ ಸರ್ಕಾರ ಮರು ತೀರ್ಪಿಗೆ ಅರ್ಜಿ ನೀಡಬೇಕೆಂದು ಒತ್ತಾಯಿ ಸಿದರು. ಇದರ ಹಿನ್ನೆಲೆ ತಾ. 14 ರಂದು ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಸುಮಾರು ಐದು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದೆ. ಮೆರವಣಿಗೆಯ ನಂತರ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಭಾಷಣ ಗಾರರಾಗಿ ಇರಿಟಿ ಪ್ರಗತಿ ವಿದ್ಯಾನಿ ಕೇತನ ಶಾಲೆಯ ಪ್ರಾಂಶುಪಾಲ ವಲ್ಸನ್ ತಿಲ್ಲಂಗೇರಿ ಮತ್ತು ಮಂಗಳೂರಿನ ದುರ್ಗ ವಾಹಿನಿ ಸಂಯೋಜಕಿ ವಿದ್ಯಾಮಲ್ಯ ಭಾಗವಹಿಸಲಿದ್ದಾರೆ ಎಂದರು.

ಉಪಾಧ್ಯಕ್ಷ ಬಿ.ಎಂ. ಪ್ರಕಾಶ್ ಮಾತನಾಡಿ, ಆಚಾರ-ವಿಚಾರಗಳನ್ನು ನಂಬಿ ಬದುಕುವ ಜನರಿಗೆ ಬಹು ದೊಡ್ಡ ಆಘಾತವಾಗಿದೆ. ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವಾಸ ಉತ್ತಮ ಬೆಳವಣಿಗೆಯ ಲಕ್ಷಣವಲ್ಲ. ಸುಪ್ರಿಂ ಕೋರ್ಟ್ ನೀಡಿದ ತೀರ್ಪನ್ನು ಮತ್ತೆ ಪರಿಶೀಲಿಸಿ ತೀರ್ಪು ನೀಡುವಂತೆ ಕೇರಳ ಸರ್ಕಾರ ಅರ್ಜಿ ಹಾಕುವ ಮೂಲಕ ಅಯ್ಯಪ್ಪ ಸ್ವಾಮಿ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳ ಬೇಕೆಂದು ಈ ಸಂದರ್ಭ ಒತ್ತಾಯಿಸಿದರು. ಈ ಕಾರ್ಯಕ್ರಮವನ್ನು ಭಗತ್ ಸಿಂಗ್ ಯುವಕರ ಸಂಘ ಆಯೋಜಿಸಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸಿಂಗಿ ಸÀತೀಶ್, ಸಹ ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಕೋಶಾಧಿಕಾರಿಗಳಾದ ಹೆಚ್. ಶ್ರೀನಿವಾಸ್ ಮುಕುಂದನ್, ವೇಣುಗೋಪಾಲ್ ಉಪಸ್ಥಿತರಿದ್ದರು.