ಒಡೆಯನಪುರ, ಅ. 10: ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಆಶಾ ಸ್ಪೂರ್ತಿ ಕಾರ್ಯಕ್ರಮದಡಿಯಲ್ಲಿ ಒಡೆಯನಪುರ, ಗೌಡಳ್ಳಿ, ಶುಂಠಿ, ನಂದಿಗುಂದ, ಹತ್ತಲಕೇರಿ, ಕ್ತಾತನಹಳ್ಳಿ, ಅಂಕನಹಳ್ಳಿ, ಗುಡುಗಳಲೆ ಮುಂತಾದ ಗ್ರಾಮಗಳಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ರಗ್ಗು, ಚಾಪೆ, ಬೆಡ್ಶೀಟ್, ಗುದ್ದಲಿ, ದಬ್ಬೆ ಮುಂತಾದ ಅವಶ್ಯ ಸಾಮಗ್ರಿ ಮತ್ತು ಅಗತ್ಯ ಪರಿಕರಗಳನ್ನು ಉಚಿತವಾಗಿ ಅಂಗನವಾಡಿಗಳಿಗೆ ಹೋಗಿ ವಿತರಣೆ ಮಾಡಲಾಯಿತು.
ಈ ಸಂದರ್ಭ ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್, ಕಾರ್ಯದರ್ಶಿ ಎ.ಡಿ. ಮೋಹನ್ಕುಮಾರ್, ಪದಾಧಿಕಾರಿಗಳಾದ ಹೆಚ್.ಪಿ. ಚಂದನ್, ಹೆಚ್.ವಿ. ದಿವಾಕರ್, ಜಿತೇಂದ್ರ, ಹೆಚ್.ಎಸ್. ವಸಂತ್, ಹೆಚ್.ಎಸ್. ಯಶ್ವಂತ್, ಡಿ. ಅರವಿಂದ್ ರವಿ ಮುಂತಾದವರು ಹಾಜರಿದ್ದರು.