ವೀರಾಜಪೇಟೆ, ಅ. 10: ವೀರಾಜಪೇಟೆ ತಾಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ 13 ಅಂಗನವಾಡಿ ಕೇಂದ್ರದವರು ಸೇರಿ ‘ಪೋಷಣ ಮಾಸ’ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅರಮೇರಿ, ಕಡಂಗ, ಬೇತ್ರಿ, ಕುಂಜಲಗೇರಿ, ಬೆಳ್ಳುಮಾಡು, ಚಾಮಿಯಾಲ, ಮೈತಾಡಿ, ಮಲ್ಲಮಟ್ಟಿ, ಕಡಂಗಮರೂರು, ಚೂರಿಯಾಲ, ಬೆಳ್ಳುಮಾಡು, ಬಾರಿಕೆ ಅಂಗನವಾಡಿ ಕೇಂದ್ರಗಳ ಸಹಯೋಗದಲ್ಲಿ ಇತ್ತೀಚೆಗೆ ಅಂಗನವಾಡಿ ಕಾರ್ಯಕರ್ತೆರು ಮತ್ತು ಸಹಾಯಕಿಯರ ಸಹಕಾರದೊಂದಿಗೆ ‘ಪೋಷಣ ಮಾಸ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದರಲ್ಲಿ ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿಯರು ಭಾಗವಹಿಸಿ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಪಡೆದರಲ್ಲದೆ, ಅಂಗನವಾಡಿ ಕಾರ್ಯಕರ್ತೆಯರು ಜೊತೆ ಗೂಡಿ ಆಹಾರವನ್ನು ಸಿದ್ಧಪಡಿಸಿ, ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿಯರಿಗೆ ಉಣಬಡಿಸಿದರು. ಕಾರ್ಯಕ್ರಮವನ್ನು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಸೀತಾಲಕ್ಷ್ಮಿ ಉದ್ಘಾಟಿಸಿ ಮಾತನಾಡಿ, ಸರಕಾರವು ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗಾಗಿ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಜಾರಿಗೆ ತಂದಿದು,್ದ ಇದರಲ್ಲಿ ಮಾತೃವಂದನಾ ಯೋಜನೆಯಲ್ಲಿ ರೂ. 5 ಸಾವಿರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೂ, ರೂ. 1 ಸಾವಿರವನ್ನು ಆರೋಗ್ಯ ಇಲಾಖೆಯಿಂದಲೂ ನೀಡುತ್ತಿದ್ದಾರೆ, ಇದನ್ನು ಪಡೆದುಕೊಂಡು ಗರ್ಭಿಣಿ ಮತ್ತು ಬಾಣಂತಿಯರು ಒಳ್ಳೆಯ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಿ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿದರೆ ಸಮಾಜವು ಕೂಡಾ ಆರೋಗ್ಯವಂತವಾಗಲು ಕಾರಣವಾಗುತ್ತದೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಾಕೋಟುಪರಂಬು ಪಂಚಾಯಿತಿ ಅಧ್ಯಕ್ಷೆ ಮೋಹಿನಿ, ಡಾ. ಪ್ರಿಯಾಂಕ, ಆರೊಗ್ಯ ಸಹಾಯಕಿಯರಾದ ಹೇಮಲತ, ಚೈತ್ರÀ ಮತ್ತು ರೇಣು ಭಾಗವಹಿಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ದಮಯಂತಿ, ಕಾವೇರಿ, ಟೈನಿ, ನೀಲಮ್ಮ, ಮೀನಾಕ್ಷಿ, ಮಾಯಮ್ಮ, ಅರ್ಚನ, ಗೀತ, ರಜೀನಾ ಕುಮಾರಿ, ಚೋಂದಮ್ಮ, ಶೈಲಜ, ವನಜ ಮತ್ತು ಪೂವಮ್ಮ ಹಾಜರಿದ್ದರು. ಕಾವೇರಿ ಪ್ರಾರ್ಥಿಸಿ, ಅರ್ಚನ ಸ್ವಾಗತಿಸಿ, ಶೈಲಜ ವಂದಿಸಿದರು.