ಮಡಿಕೇರಿ, ಅ. 8: ಐತಿಹಾಸಿಕ ಹಿನ್ನೆಲೆ ಇರುವ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸರಕಾರದಿಂದ ರೂ. 50 ಲಕ್ಷ ಹಾಗೂ ಗೋಣಿಕೊಪ್ಪಲು ದಸರಾಗೆ ರೂ. 25 ಲಕ್ಷ ಅನುದಾನ ಒದಗಿಸುವದಾಗಿ ರೇಷ್ಮೆ, ಪ್ರವಾಸೋದ್ಯಮ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಾ.ರಾ. ಮಹೇಶ್ ಘೋಷಣೆ ಮಾಡಿದ್ದಾರೆ.ದಸರಾ ಉತ್ಸವ ಅಂಗವಾಗಿ ಕಾವೇರಿ ಕಲಾಕ್ಷೇತ್ರದಲ್ಲಿ ಸಚಿವರ ಮಡಿಕೇರಿ, ಅ. 8: ಐತಿಹಾಸಿಕ ಹಿನ್ನೆಲೆ ಇರುವ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸರಕಾರದಿಂದ ರೂ. 50 ಲಕ್ಷ ಹಾಗೂ ಗೋಣಿಕೊಪ್ಪಲು ದಸರಾಗೆ ರೂ. 25 ಲಕ್ಷ ಅನುದಾನ ಒದಗಿಸುವದಾಗಿ ರೇಷ್ಮೆ, ಪ್ರವಾಸೋದ್ಯಮ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಾ.ರಾ. ಮಹೇಶ್ ಘೋಷಣೆ ಮಾಡಿದ್ದಾರೆ.ದಸರಾ ಉತ್ಸವ ಅಂಗವಾಗಿ ಕಾವೇರಿ ಕಲಾಕ್ಷೇತ್ರದಲ್ಲಿ ಸಚಿವರ ಸಾಂಪ್ರದಾಯಿಕವಾಗಿ ಆಚರಣೆ ಮಾಡುವಂತೆ ಸೂಚನೆ ನೀಡಿದ್ದೆ. ಸಭೆಯಲ್ಲಿದ್ದವರು ಇದನ್ನು ದಸರಾ ಸಮಿತಿಯವರಿಗೆ ಹೇಳಿಲ್ಲವೇ? ಎಂದು ಪ್ರಶ್ನಿಸಿದರು.
ಜಿಲ್ಲೆಯ 7-8 ಗ್ರಾಮ ಪಂಚಾಯಿತಿಯಲ್ಲಿ ಭೂಕುಸಿತ ಆಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮವೂ ಮುಖ್ಯವಾಗಿದೆ. ಪ್ರವಾಸಿಗರನ್ನು ಮರಳಿ ಕರೆಯಬೇಕಾದರೆ, ದಸರಾ ಉತ್ಸವ ಮಾಡಬೇಕಿದೆ. ಆದರೆ ಅದ್ಧೂರಿಯಾಗಿ ಬೇಡ, ಸಾಂಪ್ರದಾಯಿಕವಾಗಿ ಮಾಡೋಣವೆಂದರು. ಪ್ರಸ್ತುತ ಹಣದ ಕೊರತೆ ಇದೆ, ಜನರ ಬಳಿ ಕೇಳಲಾಗುವದಿಲ್ಲ. ಈ ಘಟನೆ ನಡೆಯದೇ ಇದ್ದಿದ್ದರೆ ಅದ್ಧೂರಿ ದಸರಾ ಮಾಡಬೇಕೆಂಬ ಆಸೆ ಮುಖ್ಯಮಂತ್ರಿಯವರಲ್ಲಿತ್ತು. ಮೈಸೂರು ದಸರಾ ಅದ್ಧೂರಿಯಾಗಿ ಆಗುತ್ತಿದೆ. ಆದರೆ ಇಲ್ಲಿ ದೈವೇಚ್ಛೆ ಈ ರೀತಿಯಾಗಿದೆ. ಹಾಗಾಗಿ ಗೋಣಿಕೊಪ್ಪದಲ್ಲಿ ಶ್ರದ್ಧಾ - ಭಕ್ತಿಯಿಂದ ಆಚರಣೆಗೆ ರೂ. 25 ಲಕ್ಷ ಹಾಗೂ
(ಮೊದಲ ಪುಟದಿಂದ) ಮಡಿಕೇರಿಯಲ್ಲಿ ಸಾಂಪ್ರದಾಯಿಕ ಆಚರಣೆಗೆ ರೂ. 50 ಲಕ್ಷ ನೀಡುವದಾಗಿ ಘೋಷಿಸಿದರು. ನಿರಾಶ್ರಿತರ ಮನೆ ನಿರ್ಮಾಣ ಆಗಿ ಪರಿಹಾರ ಆದ ಬಳಿಕ ಮುಂದಿನ ವರ್ಷದಿಂದ ಅದ್ಧೂರಿಯಾಗಿ ಆಚರಣೆ ಮಾಡೋಣವೆಂದು ಹೇಳಿದರು.
ಅನುದಾನ ಅತ್ಯವಶ್ಯ
ಪ್ರಾಸ್ತಾವಿಕವಾಗಿ ಮಾತನಾಡಿದ ದಸರಾ ಸಮಿತಿ ಅಧ್ಯಕ್ಷ ಮಹೇಶ್ ಜೈನಿ, ಜಲಪ್ರಳಯದಿಂದಾಗಿ ಯಾವ ರೀತಿಯ ಯೋಜನೆ ಹಾಕಿಕೊಳ್ಳಬೇಕೆಂಬ ಪರಿಸ್ಥಿತಿಯಲ್ಲಿ ದಸರಾ ಸಮಿತಿ ಇಲ್ಲ, ಎರಡು ದಿನದಲ್ಲಿ ಕರಗದೊಂದಿಗೆ ನಾಡಹಬ್ಬಕ್ಕೆ ಚಾಲನೆ ದೊರಕಲಿದೆ. ವಿಖ್ಯಾತಿ ಹೊಂದಿರುವ ದಸರಾಗೆ ದಶಮಂಟಪಗಳೇ ಮೆರುಗು. ಆದರೆ, ಇದೀಗ ಸೂತಕದ ಛಾಯೆಯಿದ್ದು, ಹೊರಬರಲಾಗುತ್ತಿಲ್ಲ. ಹಾಗಾಗಿ ಅದ್ಧೂರಿ ಆಚರಣೆ ಕೈಬಿಟ್ಟು ಸಾಂಪ್ರದಾಯಿಕ ಆಚರಣೆಗೆ ತೀರ್ಮಾನಿಸಲಾಗಿದೆ. ವೇದಿಕೆ ನಿರ್ಮಾಣ, ಸಾಂಸ್ಕøತಿಕ ಕ್ರೀಡೆ, ಕವಿಗೋಷ್ಠಿಯೊಂದಿಗೆ ಈ ಬಾರಿ ಆಯುಧಾ ಪೂಜಾ ಆಚರಣೆಯನ್ನು ಕೂಡ ಕೈ ಬಿಡಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ಕರಗದೇವತೆಗಳಿಗೆ ಶಕ್ತಿಯಿದ್ದು, ಹಾಗಾಗಿ ನಗರದಲ್ಲಿ ಸಾವು - ನೋವು ಸಂಭವಿಸಿಲ್ಲ. ಯಾವದೇ ಕಾರಣಕ್ಕೂ ದಸರಾ ನಿಲ್ಲಿಸುವಂತಿಲ್ಲ. ವರ್ಷಂಪ್ರತಿ ವೇದಿಕೆ, ಬಹುಮಾನ ಸೇರಿದಂತೆ 37 ಲಕ್ಷದಷ್ಟು ವೆಚ್ಚವಾಗುತ್ತಿದೆ. ಈ ನಿಟ್ಟಿನಲ್ಲಿ ಶಾಶ್ವತ ವೇದಿಕೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಕಳೆದ ಬಾರಿ ಕೂಡ ರೂ. 50 ಲಕ್ಷ ಮಾತ್ರ ಅನುದಾನ ಬಂದಿದ್ದು, ಸಮಿತಿ ರೂ. 10 ಲಕ್ಷ ಸಾಲದಲ್ಲಿದೆ. ಇದೀಗ ಸರಕಾರದ ಅನುದಾನದಿಂದ ಮಾತ್ರ ದಸರಾ ಆಚರಣೆ ಸಾಧ್ಯವೆಂದು ಹೇಳಿದರು.
ಹೆಚ್ಚಿಗೆ ಅನುದಾನ ಬೇಕು
ದಶಮಂಟಪಗಳ ಸಮಿತಿ ಪರವಾಗಿ ಮಾತನಾಡಿದ ನಗರಸಭಾ ಸದಸ್ಯ ಕೆ.ಎಸ. ರಮೇಶ್, ಸರಕಾರದಿಂದಲೇ ಅನುದಾನ ಬೇಕಾಗಿರುವದರಿಂದ ಸಚಿವರು ಅನುದಾನ ಘೋಷಣೆ ಮಾಡಿದರೆ, ಯಾವದೇ ಚರ್ಚೆಗಳಿಗೆ ಅವಕಾಶವಿರುವದಿಲ್ಲ. ದುರಂತದಿಂದಾಗಿ ವ್ಯಾಪಾರಸ್ಥರು, ಹೊಟೇಲ್ ಉದ್ಯಮಿಗಳು ಕಂಗಾಲಾಗಿದ್ದಾರೆ. ದಸರಾದಿಂದ ಜನರು ಆಕರ್ಷಿತರಾಗಿ ಪ್ರವಾಸೋದ್ಯಮ ಕೂಡ ಬೆಳೆಯಲಿ ಎಂಬ ನಿರೀಕ್ಷೆಯಲ್ಲಿದ್ದೇವೆ. ಸಾಂಪ್ರದಾಯಿಕ ಆಚರಣೆಗೆ ಸರಕಾರದ ಅನುದಾನದ ಅವಶ್ಯಕತೆಯಿದ್ದು, ಹೆಚ್ಚಿಗೆ ಅನುದಾನ ಘೋಷಿಸುವಂತೆ ಮನವಿ ಮಾಡಿದರು.
ನಿಲ್ಲಿಸಲು ಸಾಧ್ಯವಿಲ್ಲ
ದಶಮಂಟಪಗಳ ಸಮಿತಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಜಲಪ್ರಳಯದಿಂದ ಭೂಕುಸಿತ ವಾಗಿದ್ದರೂ ನಾವುಗಳು ಆರಾಧಿಸುವ ದೇವರ ಆಲಯಗಳಿಗೆ ಯಾವದೇ ತೊಂದರೆ ಆಗಿಲ್ಲ. ಹಾಗಾಗಿ ಭಕ್ತಿ _ ಭಾವದಿಂದ 200 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ದಸರಾ ಉತ್ಸವವನ್ನು ನಿಲ್ಲಿಸಲು ಸಾಧ್ಯವಿಲ್ಲ. ವಿಜೃಂಭಣೆಯನ್ನು ಬಿಟ್ಟು ಸಾಂಪ್ರದಾಯಿಕವಾಗಿ ಕರಗ, ಮಂಟಪಗಳನ್ನು ಹೊರಡಿಸೋಣ. ಇಲ್ಲವಾದಲ್ಲಿ ಮುಂದಿನ ವರ್ಷವೂ ಅನಾಹುತಗಳಾಗಬಹುದು. ಜಿಲ್ಲೆಗೆ ಮತ್ತೆ ಪ್ರವಾಸಿಗರು ಬರುವಂತಾಗಲು ಜನರಲ್ಲಿ ಭಕ್ತಿ - ಭಾವನೆ ಬರುವಂತಾಗಲು ಸಾಂಪ್ರದಾಯಿಕ ಆಚರಣೆ ಆಗಬೇಕು, ಸರಕಾರ ಹೆಚ್ಚಿನ ಅನುದಾನ ಕಲ್ಪಿಸಬೇಕೆಂದು ಕೋರಿದರು. ದಶಮಂಟಪ ಸಮಿತಿ ಪದಾಧಿಕಾರಿ ಆರ್.ಬಿ. ರವಿಕುಮಾರ್ ಇದೇ ಮಾತನ್ನು ಪ್ರತಿಪಾದಿಸಿದರು.
ಎಲ್ಲರ ಸಮ್ಮುಖದಲ್ಲಿ ತೀರ್ಮಾನವಾಗಲಿ
ದಸರಾ ಸಮಿತಿ ಗೌರವ ಸಲಹೆಗಾರ ಜಿ. ಚಿದ್ವಿಲಾಸ್ ಮಾತನಾಡಿ, ದಸರಾ ಸಭೆ ತಡವಾಗಿ ನಡೆದಿರುವದು ಹಾಗೂ ದಸರಾ ಆರಂಭಕ್ಕೆ ಇನ್ನೂ ಎರಡೇ ದಿನಗಳಿದ್ದು, ಯಾವದೇ ತೀರ್ಮಾನ ಕೈಗೊಳ್ಳದ ಹಿನ್ನೆಲೆ ಗೊಂದಲಗಳು ಉಂಟಾಗಿವೆ. ಕಾಲ ಮೀರಿದ ಅವಧಿಯಲ್ಲಿ ಅನುದಾನ ವಿತರಣೆ ಇಲ್ಲಿಯೇ ಎಲ್ಲರ ಸಮ್ಮುಖದಲ್ಲಿ ಆಗಬೇಕಿದೆ ಎಂದು ಸಲಹೆ ಮಾಡಿದರು.
ದಸರಾ ಎಂದರೆ ಕೇವಲ ಮಂಟಪಗಳು ಮಾತ್ರವಲ್ಲ; ಒಂದು ಲಕ್ಷದಷ್ಟು ಮಂದಿ ಪ್ರವಾಸಿಗರು ಬರುತ್ತಾರೆ. ಅವರುಗಳ ರಕ್ಷಣೆಗೆ ನಗರದಲ್ಲಿ 1500 ರಷ್ಟು ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತದೆ. ಸಿ.ಸಿ. ಕ್ಯಾಮರಾ ಅಳವಡಿಸಬೇಕಾಗಿದೆ, ಈ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಿ ಎಂದರು. ದಶಮಂಟಪ ಸಮಿತಿಯವರು ದಸರಾ ಸಮಿತಿಯಿಂದ ಹೊರಬಂದು ಪ್ರತ್ಯೇಕ ದಸರಾ ಆಚರಿಸುವದಾಗಿ ಹೇಳಿದರೆ, ದಸರಾ ಸಮಿತಿಗೆ ಎಲ್ಲಿಂದ ಅನುದಾನ ತರುವದು, ಯಾರನ್ನು ಭೇಟಿ ಮಾಡುವದು ಎಂಬ ಗೊಂದಲವಿದೆ, ಈ ನಿಟ್ಟಿನಲ್ಲಿ ಎಲ್ಲರ ಸಮ್ಮುಖದಲ್ಲಿ ತೀರ್ಮಾನವಾಗಲಿ ಮತ್ತೆ ಗೊಂದಲ ಆಗುವದು ಬೇಡವೆಂದು ಅಭಿಪ್ರಾಯಿಸಿದರು.
ಸಭೆಯಲ್ಲಿ ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ನಗರಸಭಾಧ್ಯಕ್ಷೆ, ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ, ಗೋಣಿಕೊಪ್ಪ ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ವಿಶೇಷ ಜಿಲ್ಲಾಧಿಕಾರಿ ಜಗದೀಶ್, ಉಪವಿಭಾಗಾಧಿಕಾರಿ ಜವರೇಗೌಡ, ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪಣ್ಣೇಕರ್ ಇದ್ದರು. ಪ್ರತಿಭಾ ಮಧುಕರ್ ಪ್ರಾರ್ಥಿಸಿದರೆ, ನಗರಸಭಾ ಆಯುಕ್ತ ರಮೇಶ್ ಸ್ವಾಗತಿಸಿದರು. ದಸರಾ ಸಮಿತಿ ಕಾರ್ಯದರ್ಶಿ ಚುಮ್ಮಿದೇವಯ್ಯ ನಿರೂಪಿಸಿ, ವಂದಿಸಿದರು.