ಮಡಿಕೇರಿ, ಅ. 8: ಅತಿವೃಷ್ಟಿ, ಭೂಕುಸಿತದಿಂದಾಗಿ ಕೊಡಗಿನಲ್ಲಿ ಪ್ರವಾಸೋದ್ಯಮ ಕೂಡ ಕುಸಿದಿದ್ದು, ಮಡಿಕೇರಿ, ಅ. 8: ಅತಿವೃಷ್ಟಿ, ಭೂಕುಸಿತದಿಂದಾಗಿ ಕೊಡಗಿನಲ್ಲಿ ಪ್ರವಾಸೋದ್ಯಮ ಕೂಡ ಕುಸಿದಿದ್ದು, ದಾಗಿ ಪ್ರವಾಸೋದ್ಯಮ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಭರವಸೆ ನೀಡಿದ್ದಾರೆ.
ಕೊಡಗು ಜಿಲ್ಲಾ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಮಾಲೀಕ ಸಂಘದ ಮನವಿ ಮೇರೆಗೆ ಕಾವೇರಿ ಕಲಾಕ್ಷೇತ್ರದಲ್ಲಿಂದು ಸಂಜೆ ಸಭೆ ಏರ್ಪಡಿಸಿ, ಉದ್ಯಮಿಗಳ ಮನವಿ ಸ್ವೀಕಾರ ಮಾಡಿ ಮಾತನಾಡಿದರು. ಜಿಲ್ಲೆಯ ಹೊಟೇಲ್ ಉದ್ಯಮಿಗಳ ಸಮಸ್ಯೆ ಅರ್ಥವಾಗಿದೆ. ಪ್ರವಾ ಸೋದ್ಯಮ ಅಭಿವೃದ್ಧಿಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಸಹಕಾರ ಬೇಕಿದೆ. ಸರಕಾರದ ವತಿಯಿಂದ ಸಹಕಾರ ಆಗುತ್ತಿದೆ ಎಂದರು. ತಾವು ತಾ. 20ರವರೆಗೆ ಮೈಸೂರು ದಸರಾ ಹಿನ್ನೆಲೆಯಲ್ಲಿ ಬಿಡುವಿಲ್ಲದೆ ಇದ್ದು, 20ರ ನಂತರ ಬೆಂಗಳೂರಿನ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಪೊರೇಶನ್ ಇಲಾಖೆ ಹಾಗೂ ಏಜೆಂಟರುಗಳ ಸಮ್ಮುಖದಲ್ಲಿ ಸಭೆ ಏರ್ಪಡಿಸಿ ಯಾವ ರೀತಿಯ ಕ್ರಮ ಕೈಗೊಳ್ಳಬಹುದೆಂಬ ಬಗ್ಗೆ ಚರ್ಚಿಸುವದಾಗಿ ಹೇಳಿದರು. ಕೇರಳದಲ್ಲಿ ಶೇ. 99 ರಷ್ಟು ಪ್ರವಾಸೋದ್ಯಮ ಕುಸಿದಿದೆ. ಕೊಡಗಿನಲ್ಲಿ ಶೇ 1 ರಷ್ಟು ಕುಸಿದಿದ್ದು, ಕೇರಳದವರು ಈಗಾಗಲೇ ಪ್ರವಾಸಿಗರನ್ನು ಮರಳಿ ಕರೆತರುವ ಕೆಲಸ ಆಗುತ್ತಿದೆ. ಕೊಡಗಿನಲ್ಲೂ ಕರೆ ತರಲು ಆದಷ್ಟು ಶೀಘ್ರ ಕಾರ್ಯೋ ನ್ಮುಖರಾಗುವದಾಗಿ ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಗೌರವ
(ಮೊದಲ ಪುಟದಿಂದ) ಸಲಹೆಗಾರ ಜಿ. ಚಿದ್ವಿಲಾಸ್ ಅವರು, ಪ್ರವಾಸಿಗರಿಗೆ ಹೇರಿದ್ದ ನಿರ್ಬಂಧವನ್ನು ಜಿಲ್ಲಾಧಿಕಾರಿಗಳು ಸೆ. 9 ರಂದೇ ತೆರವುಗೊಳಿಸಿದ್ದು, ಪ್ರವಾಸಿಗರು ಬರಬಹುದೆಂಬ ನಿರೀಕ್ಷೆ ಇತ್ತು. ಆದರೆ ಇದೀಗ ದಸರಾ ಸಂದರ್ಭದಲ್ಲೂ ಪ್ರವಾಸಿಗರ ಆಗಮನದ ಸುಳಿವಿಲ್ಲದಂತಾಗಿದೆ. ಉದ್ಯಮಿಗಳು ಕೆಲಸ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯಮಗಳ (ಮೊದಲ ಪುಟದಿಂದ) ಸಲಹೆಗಾರ ಜಿ. ಚಿದ್ವಿಲಾಸ್ ಅವರು, ಪ್ರವಾಸಿಗರಿಗೆ ಹೇರಿದ್ದ ನಿರ್ಬಂಧವನ್ನು ಜಿಲ್ಲಾಧಿಕಾರಿಗಳು ಸೆ. 9 ರಂದೇ ತೆರವುಗೊಳಿಸಿದ್ದು, ಪ್ರವಾಸಿಗರು ಬರಬಹುದೆಂಬ ನಿರೀಕ್ಷೆ ಇತ್ತು. ಆದರೆ ಇದೀಗ ದಸರಾ ಸಂದರ್ಭದಲ್ಲೂ ಪ್ರವಾಸಿಗರ ಆಗಮನದ ಸುಳಿವಿಲ್ಲದಂತಾಗಿದೆ. ಉದ್ಯಮಿಗಳು ಕೆಲಸ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯಮಗಳ ಉದ್ದೇಶದೊಂದಿಗೆ ‘ಕೊಡಗು ಸೇಫ್., ಬನ್ನಿ ಕೊಡಗಿಗೆ’ ಎಂಬ ಸಂದೇಶದೊಂದಿಗೆ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವ ಕಾರ್ಯ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಚಿವರಾದಿಯಾಗಿ, ಜನಪ್ರತಿನಿಧಿಗಳ ಸಹಕಾರ ತೀರಾ ಅಗತ್ಯವಿದೆ. ಸಹಕಾರ ನೀಡುವಂತೆ ಮನವಿ ಮಾಡಿದರು.
ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್ ಅವರು ಪ್ರವಾಸೋದ್ಯಮ ಹಾಗೂ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆ ಹಾಗೂ ಬೇಡಿಕೆಗಳ ಮನವಿಯನ್ನು ಸಚಿವರೆದುರು ಮಂಡಿಸಿದರು.
ಇಲಾಖೆ ವತಿಯಿಂದ ಮಾದ್ಯಮಗಳ ಮೂಲಕ ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸುವದು, ಸಚಿವರಾದ ತಾವು ಪತ್ರಿಕಾಗೋಷ್ಠಿ ಕರೆದು ಈ ಬಗ್ಗೆ ಮನವರಿಕೆ ಮಾಡುವದು, ರಾಜ್ಯದ ಹೊರಭಾಗದಲ್ಲಿ ಈ ಬಗ್ಗೆ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳುವದು, ರಾಜ್ಯ ಸಾರಿಗೆ ಬಸ್ ಹಾಗೂ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಕೊಡಗು ಪ್ರವಾಸೋದ್ಯಮದ ಬಗ್ಗೆ ಪೋಸ್ಟರ್ಗಳ ಅಳವಡಿಕೆ, ಕೆಎಸ್ಟಿಡಿಪಿ ವತಿಯಿಂದ ಉತ್ತೇಜನ ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್, ರಾಜ್ಯದ ಪ್ರವಾಸೋದ್ಯಮ ಏಜೆಂಟರುಗಳೊಂದಿಗೆ ಬೆಂಗಳೂರಿನಲ್ಲಿ ಸಭೆ, ಕರ್ನಾಟಕ ಚಿತ್ರಮಂದಿರಗಳಲ್ಲಿ ಹಾಗೂ ಮಲ್ಟಿಫ್ಲೆಕ್ಸ್ಗಳಲ್ಲಿ ಪ್ರಕಟಣೆಗಳ ಮೂಲಕ ಕೊಡಗಿಗೆ ಪ್ರವಾಸಿಗರನ್ನು ಆಕರ್ಷಿಸುವದು, ಮೈಸೂರು ದಸರಾ ಕಾರ್ಯಕ್ರಮಗಳಲ್ಲಿ ಕೊಡಗು ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಪ್ರಚಾರ ಮಾಡುವದು ಸೇರಿದಂತೆ ಕೊಡಗಿನ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಆಸಕ್ತಿ ತೋರಬೇಕೆಂಬ ಮನವಿಯನ್ನು ಇದೇ ಸಂದರ್ಭ ಸಚಿವರಿಗೆ ಸಲ್ಲಿಸಲಾಯಿತು.
ಈ ಸಂದರ್ಭ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್, ವೀಣಾ ಅಚ್ಚಯ್ಯ, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪಣ್ಣೇಕರ್, ವಿಶೇಷ ಜಿಲ್ಲಾಧಿಕಾರಿ ಜಗದೀಶ್, ಉಪವಿಭಾಗಾಧಿಕಾರಿ ಜವರೇಗೌಡ ಇನ್ನಿತರರಿದ್ದರು.