ಮಡಿಕೇರಿ, ಅ. 8: ಕೊಡಗು ದಂತ ವೈದ್ಯಕೀಯ ಕಾಲೇಜಿನ 2018ರ ಪದವಿ ಪ್ರದಾನ ಸಮಾರಂಭ ಇತ್ತೀಚೆಗೆ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ ಗಳೊಂದಿಗೆ ಆರಂಭಗೊಂಡು, 46 ಪದವಿಗಳನ್ನು ಹಾಗೂ 35 ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಲಾಯಿತು.
ಕೊಡಗು ದಂತ ವೈದ್ಯಕೀಯ ಕಾಲೇಜಿನ ಡೀನ್ ಪ್ರೊ. ಡಾ. ಸುನಿಲ್ ಮುದ್ದಂiÀi್ಯ ಮಾತನಾಡಿ, ಕೊಡಗು ದಂತ ವೈದ್ಯಕೀಯ ಕಾಲೇಜಿನ ಬಗ್ಗೆ ಪ್ರಸ್ತಾಪಿಸುತ್ತಾ ದಂತ ಆರೋಗ್ಯ ಕ್ಷೇತ್ರದ ಎಲ್ಲಾ 9 ವಿಭಾಗಗಳಲ್ಲೂ ಸ್ನಾತಕೋತ್ತರ ತರಬೇತಿ ಲಭ್ಯವಿರುವದಾಗಿಯೂ ಮತ್ತು ತಮ್ಮ ಕಾಲೇಜು ಹಲವಾರು ಹೆಸರಾಂತ ದಂತ ವೈದ್ಯರುಗಳನ್ನು, ಉಪನ್ಯಾಸಕರುಗಳನ್ನು, ವಿಜ್ಞಾನಿಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ ಎಂದು ಹೇಳಿದರು. ಯುರೋಪ್, ಉತ್ತರ ಅಮೇರಿಕಾ ಮತ್ತು ದಕ್ಷಿಣ ಪೂರ್ವ ಏಷ್ಯಾ ಖಂಡದಿಂದ 5 ಹೆಸರಾಂತ ವಿಶ್ವವಿದ್ಯಾನಿಲಯಗಳು ಕೊಡಗು ದಂತ ಕಾಲೇಜಿನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿರುವದರ ಫಲವಾಗಿ ಮೇಲ್ಕಂಡ ವಿಶ್ವವಿದ್ಯಾನಿಲಯಗಳ ಸಂಶೋಧಕರು ಹಾಗೂ ಹಿರಿಯ ಪ್ರಾಧ್ಯಾಪಕರುಗಳು ಕೊಡಗು ದಂತ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡುತ್ತಿರುವದಾಗಿ ತಿಳಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾದ ಪ್ರೊ. ಪೀಟರ್ ಬಾರ್ಬಲಿ ಅವರು ಕೊಡಗು ದಂತ ವೈದ್ಯಕೀಯ ಕಾಲೇಜಿನ ಮುನ್ನಡೆಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ದಂತ ಕಾಲೇಜುಗಳು ವಿಶ್ವದ ಬೇರೆ ದಂತ ವೈದ್ಯಕೀಯ ವಿದ್ಯಾಲಯಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳುವದರಿಂದ ಹೆಚ್ಚಿನ ಮಹತ್ವ ಪಡೆಯುತ್ತವೆ ಎಂದು ಹೇಳಿದರು.
ವಾಯುಸೇನೆ ದಂತ ವೈದ್ಯಕೀಯ ಕಾಲೇಜು, ಕಮಾಂಡರ್ ಜಯನ್ ಮತ್ತು ಡಾ. ಆನ್ಮೋಲ್ ಕಲಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಡಾ. ಆನ್ಮೋಲ್ ಕಲಾ ಅವರನ್ನು ಡಾ. ಕೆ.ಸಿ. ಪೊನ್ನಪ್ಪ ಸನ್ಮಾನಿಸಿದರು. “ಜರ್‍ನಲ್ ಆಫ್ ಮೆಲ್ಟಿಡಿಸೆಪ್ಲೆನರಿ ಡೆಂಟಲ್ ರಿಸರ್ಚ್” ಅನ್ನು ಬಿಡುಗಡೆ ಮಾಡಲಾಯಿತು.
ಡಾ. ಸುನಿಲ್ ಮುದ್ದಯ್ಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮೀಸಲಿದ್ದ ಚಿನ್ನದ ಪದಕ ವಿಜೇತರನ್ನು ಘೋಷಿಸಿದರು. ಡಾ. ಕೊಂಗಕೊನಾ ಭಾರದ್ವಜ್, ಡಾ. ನೌಷಿಯಾ, ಡಾ. ಶ್ವೇತ ಎಂ.ಸಿ. ಇವರುಗಳು ಪದಕಗಳನ್ನು ಪಡೆದರು. ಪ್ರೊ. ಪೀಟರ್ ಬಾರ್ ಬ್ಲೇ, ಪ್ರೊ. ಕೆ.ಕೆ. ಅಯ್ಯಪ್ಪ ಉಪಸ್ಥಿತರಿದ್ದರು.