ಸೋಮವಾರಪೇಟೆ, ಅ. 8: ಪಟ್ಟಣದ ಕಕ್ಕೆಹೊಳೆ ಸಮೀಪದ ಶ್ರೀ ಮುತ್ತಪ್ಪಸ್ವಾಮಿ ಹಾಗೂ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನವರಾತ್ರಿ ಉತ್ಸವಾಚರಣೆಯ ಅಂಗವಾಗಿ ತಾ. 10 ರಿಂದ 19ರÀ ವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.

ದೇವಾಲಯದಲ್ಲಿನ ಶ್ರೀ ಭುವನೇಶ್ವರಿ ದೇವಿಯ ಗುಡಿಯಲ್ಲಿ ತಾ. 10 ರಿಂದ 18ರ ವರೆಗೆ ಪ್ರತಿನಿತ್ಯ ಸಂಜೆ 6.30 ರಿಂದ 7.30ರ ವರೆಗೆ ಭಗವತಿ ಸೇವೆ ನಡೆಯಲಿದೆ. ವಿಜಯದಶಮಿ ದಿನವಾದ ತಾ. 19 ರಂದು ಬೆಳಿಗ್ಗೆ 8 ಗಂಟೆಯಿಂದ ದೇವಿಗೆ ವಿವಿಧ ಅಭಿಷೇಕ, ಅರ್ಚನೆ ಪೂಜೆಗಳು ನಡೆಯಲಿದೆ.

ಭಕ್ತಾಧಿಗಳಿಗೆ ಸೇವೆಯ ಅವಕಾಶವನ್ನು ಕಲ್ಪಿಸಿದ್ದು, ಸೇವಾರ್ಥ ಬಯಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9448585509ರಲ್ಲಿ ಸಂಪರ್ಕಿಸ ಬಹುದೆಂದು ದೇವಾಲಯದ ಪ್ರ.ಕಾರ್ಯದರ್ಶಿ ಎನ್.ಟಿ. ಪ್ರಸನ್ನ ನಾಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ತಾ. 10 ರಿಂದ 18ರ ವರಗೆ ನವರಾತ್ರಿ ಪೂಜೆ ನಡೆಯಲಿದೆ. ಪ್ರತಿದಿನ ಅನ್ನ ಸಂತರ್ಪಣೆ ನಡೆಯಲಿದೆ.

*ಕಾಂತೂರು ಮೂರ್ನಾಡಿನ ಭಗವತಿ ದೇವಸ್ಥಾನದಲ್ಲಿ ತಾ. 10 ರಿಂದ 19ರ ವರೆಗೆ ನವರಾತ್ರಿ ಪೂಜೆ ಪ್ರತಿದಿನ ಸಂಜೆ 7 ಗಂಟೆಗೆ ನಡೆಯಲಿದೆ. ಪ್ರತಿದಿನ ಅನ್ನದಾನವಿರುತ್ತದೆ ಎಂದು ದೇವಾಲಯದ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ತಿಳಿಸಿದೆ.

*ಚೆಯ್ಯಂಡಾಣೆ ಸಮೀಪದ ನರಿಯಂದಡ ಭಗವತಿ ದೇವಸ್ಥಾನದಲ್ಲಿ ತಾ. 10 ರಿಂದ 19 ರವರೆಗೆ ನವರಾತ್ರಿ ಪೂಜೆ ನಡೆಯಲಿದೆ. ತಾ. 19 ರಂದು ಮಧ್ಯಾಹ್ನ ಅನ್ನದಾನವಿದೆ.