*ಗೋಣಿಕೊಪ್ಪ, ಅ. 8: ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರವನ್ನು ಶಾಸಕ ಕೆ.ಜಿ. ಬೋಪಯ್ಯರವರ ಅಧ್ಯಕ್ಷತೆಯಲ್ಲಿ ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು. ದಕ್ಷಿಣ ಕೊಡಗಿನಲ್ಲಿ ಜನೌಷಧಿ ಕೇಂದ್ರಕ್ಕೆ ಪ್ರಥಮ ಬಾರಿಗೆ ಚಾಲನೆ ನೀಡಿ ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧಿಗಳು ಲಭ್ಯವಾಗುವ ರೀತಿಯಲ್ಲಿ ದೊರೆಯುವಂತೆ ಮಾಡುವದು ಔಷಧಿ ಕೇಂದ್ರದ ಮುಖ್ಯ ಕಾರಣವಾಗಿದೆ. ಶ್ರೇಷ್ಟ ಗುಣಮಟ್ಟದ 600ಕ್ಕು ಹೆಚ್ಚು ಔಷಧಿಗಳು 154ಕ್ಕು ಹೆಚ್ಚು ಸರ್ಜಿಕಲ್ ಉತ್ಪನ್ನಗಳು ಜನೌಷಧಿ ಕೇಂದ್ರದಲ್ಲಿ ದೊರೆಯಲಿದೆ ಎಂದು ಪ್ರತಾಪ್ ಸಿಂಹ ಮಾಹಿತಿ ನೀಡಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಾಮಾನ್ಯ ವರ್ಗದವರಿಗೆ ಅಗ್ಗದ ರೀತಿಯಲ್ಲಿ ಔಷಧಿಗಳು ದೊರೆ ಯುವಂತಾಗಬೇಕು ಎಂಬ ನಿಟ್ಟಿನಲ್ಲಿ
ಗೋಣಿಕೊಪ್ಪ ಭಾಗದಲ್ಲಿ ಔಷಧಿ ಕೇಂದ್ರವನ್ನು ತೆರೆಯಲಾಗಿದೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ವೈದ್ಯರುಗಳಾದ ಶಿವಪ್ಪ, ಚಂದ್ರಶೇಖರ್, ಮಾತನಾಡಿದರು.
ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅದ್ಯಕ್ಷ ಸಿ.ಕೆ. ಬೋಪಣ್ಣ, ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಸದಸ್ಯರುಗಳಾದ ರತಿ ಅಚ್ಚಪ್ಪ, ರಾಮಕೃಷ್ಣ ಭಟ್, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ವಾಣಿಜ್ಯ ಸಂಕೀರ್ಣ ಟ್ರಸ್ಟ್ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜನೌಷಧಿ ಕೇಂದ್ರ ಮಾಲೀಕ ಕಟ್ಟೆಂಗಡ ಸುನೀಲ್ ಚಂಗಪ್ಪ, ತಾಲೂಕು ಬಿ.ಜೆ.ಪಿ. ಮಂಡಲ ಅಧ್ಯಕ್ಷ ಕುಂಞಗಡ ಅರುಣ್ ಭೀಮಯ್ಯ, ಉಪಸ್ಥಿತರಿದ್ದರು.