ವರದಿ: ಚಂದ್ರಮೋಹನ್

ಕುಶಾಲನಗರ, ಅ. 8: ಪ್ರಕೃತಿ ವಿಕೋಪ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟ ಜಿಲ್ಲೆಯ ಸ್ಥಳೀಯ ಆಡಳಿತ ಮಂಡಳಿ ಚುನಾವಣೆಗೆ ಮತ್ತೆ ಮುಹೂರ್ತ ನಿಗದಿಯಾಗುತ್ತಲೇ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಲು ಪ್ರಾರಂಭಗೊಂಡಿದೆ. ಆಗಸ್ಟ್ 31 ರಂದು ನಿಗದಿಯಾಗಿದ್ದ ಚುನಾವಣೆ ಇದೀಗ ಅಕ್ಟೋಬರ್ 28 ಕ್ಕೆ ಘೋಷಣೆಯಾಗಿದೆ. ಈ ತಿಂಗಳ 16 ರಿಂದ ಚುನಾವಣೆ ಪ್ರಕ್ರಿಯೆ ಮತ್ತೆ ಪ್ರಾರಂಭಗೊಳ್ಳಲಿದ್ದು ಈ ತಿಂಗಳ 3 ರಿಂದ ನೀತಿ ಸಂಹಿತೆ ಜಾರಿಯಾಗಿದೆ. ತಾ. 16 ನಾಮಪತ್ರ ಸಲ್ಲಿಸಲು ಕೊನೆ ದಿನಾಂಕವಾಗಿದ್ದು 17 ರಂದು ನಾಮಪತ್ರ ಪರಿಶೀಲನೆ, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ತಾ. 20 ಕೊನೆಯ ದಿನಾಂಕವಾಗಿರುತ್ತದೆ. ತಾ. 28 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು ತಾ. 31ರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡು ಫಲಿತಾಂಶ ಹೊರಬೀಳಲಿದೆ.

ಈಗಾಗಲೆ 7ನೇ ವಾರ್ಡ್‍ನಿಂದ ಹಾಗೂ 3ನೇ ವಾರ್ಡ್‍ನಿಂದ 2 ನಾಮಪತ್ರಗಳು ಸಲ್ಲಿಕೆಯಾಗಿದೆ. ಮುಂದುವರೆದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ತಮ್ಮ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಪೂರ್ಣಗೊಳಿಸಿದ್ದು ಅವಕಾಶ ಕೈತಪ್ಪಿದ ಕೆಲವರು ಪಕ್ಷೇತರರಾಗಿ ಅಖಾಡಕ್ಕೆ ಇಳಿಯುವದು ಖಚಿತಗೊಂಡಿದೆ. ಕುಶಾಲನಗರ ಪಪಂ 16 ವಾರ್ಡ್‍ಗಳ ಪೈಕಿ 9 ಪುರುಷರು, 7 ಸ್ಥಾನ ಮಹಿಳೆಯರಿಗೆ ಮೀಸಲಾಗಿದ್ದು ಮೀಸಲಾತಿಗೆ ಅನುಗುಣವಾಗಿ ಹಿಂದಿನ ಸಾಲಿನಲ್ಲಿ ಸದಸ್ಯರಾಗಿದ್ದ ಕೆಲವು ಮಂದಿ ತಮ್ಮ ಮನೆ ಮಂದಿಯನ್ನೇ ಚುನಾವಣೆಗೆ ಅಭ್ಯರ್ಥಿಗಳಾಗಿ ಘೋಷಿಸುವ ತಯಾರಿಯಲ್ಲಿದ್ದಾರೆ. ರಾಜಕೀಯದಲ್ಲಿ ಕಂಡುಬರುವ ಕುಟುಂಬ ರಾಜಕಾರಣ ವ್ಯವಸ್ಥೆ ಪಪಂ ಯಲ್ಲಿ ಕೂಡ ಸ್ಪಷ್ಟವಾಗಿ ಕಾಣಬಹುದು. ಮೂರು ಪಕ್ಷಗಳು ತಮ್ಮ ಅಭ್ಯರ್ಥಿ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದು ಇನ್ನೆರೆಡು ದಿನಗಳಲ್ಲಿ ಬಿಡುಗಡೆಗೊಳಿಸಲಿದ್ದಾರೆ ಎನ್ನಲಾಗಿದೆ. ಉಳಿದಂತೆ ಎಸ್‍ಡಿಪಿಐ ಕೂಡ ತನ್ನ ಅಭ್ಯರ್ಥಿಯನ್ನು ಚುನಾವಣಾ ಅಖಾಡಕ್ಕೆ ಇಳಿಸಲು ಸನ್ನದ್ದವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರರ ಸಂಖ್ಯೆ ಕೂಡ ಅಧಿಕಗೊಳ್ಳುವ ಸಾಧ್ಯತೆ ಕಂಡುಬಂದಿದೆ.

ಕಳೆದ ಬಾರಿಯ 13 ವಾರ್ಡ್‍ಗಳ ಬದಲಿಯಾಗಿ ಈ ಸಾಲಿನಲ್ಲಿ 16 ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದ್ದು ಒಟ್ಟು 13096 ಮತದಾರರು ಜನಪ್ರತಿನಿಗಳ ಆಯ್ಕೆ ಮಾಡಬೇಕಾಗಿದೆ. ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸಮೀಪದ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಗಂಧದಕೋಟೆ ಮತ್ತು ನೂತನ ಹೌಸಿಂಗ್ ಬೋರ್ಡ್ ಪ್ರದೇಶದ 300 ಕ್ಕೂ ಅಧಿಕ ಮತದಾರರು ಮತ್ತು ಮುಳ್ಳುಸೋಗೆ ವ್ಯಾಪ್ತಿಯ ಕರಿಯಪ್ಪ ಬಡಾವಣೆ, ಜನತಾ ಕಾಲನಿ, ಓಂಕಾರ್ ಬಡಾವಣೆ ಸೇರಿದಂತೆ ಅಲ್ಲಿನ ಅಂದಾಜು 600 ಜನಸಂಖ್ಯೆಯನ್ನು ಸೇರಿಸಿ 3 ವಾರ್ಡ್‍ಗಳು ಈ ಬಾರಿ ಕುಶಾಲನಗರ ಪಪಂಗೆ ಹೆಚ್ಚುವರಿಯಾಗಿದೆ.

ಮತದಾರರ ವಿವರ: 1ನೇ ವಾರ್ಡ್-598, 2ನೇ ವಾರ್ಡ್ 542, 3ನೇ ವಾರ್ಡ್ 1073, 4ನೇ ವಾರ್ಡ್ 781, 5 ರಲ್ಲಿ 640, 6 ರಲ್ಲಿ 518, 7 ರಲ್ಲಿ 360, 8 ರಲ್ಲಿ 1107, 9 ರಲ್ಲಿ 753, 10 ರಲ್ಲಿ 956, 11 ರಲ್ಲಿ 1338, 12 ರಲ್ಲಿ 708, 13 ರಲ್ಲಿ 804, 14 ರಲ್ಲಿ 970, 15 ರಲ್ಲಿ 767 ಮತ್ತು 16 ರಲ್ಲಿ 1181 ಮತದಾರರು ಇದ್ದಾರೆ.

ಮೀಸಲಾತಿ ವಿವರ: ವಾರ್ಡ್ 1: ಹಿಂದುಳಿದ ವರ್ಗ ಎ, ವಾರ್ಡ್ 2: ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 3: ಸಾಮಾನ್ಯ, ವಾರ್ಡ್ 4: ಸಾಮಾನ್ಯ ಮಹಿಳೆ, ವಾರ್ಡ್ 5: ಪರಿಶಿಷ್ಟ ಜಾತಿ, ವಾರ್ಡ್ 6: ಹಿಂದುಳಿದ ವರ್ಗ ಎ, ವಾರ್ಡ್ 7: ಸಾಮಾನ್ಯ, ವಾರ್ಡ್ 8: ಸಾಮಾನ್ಯ ಮಹಿಳೆ, ವಾರ್ಡ್ 9: ಸಾಮಾನ್ಯ, ವಾರ್ಡ್ 10: ಸಾಮಾನ್ಯ, ವಾರ್ಡ್ 11: ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ್ 12: ಪರಿಶಿಷ್ಟ ಪಂಗಡ, ವಾರ್ಡ್ 13: ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ್ 14: ಸಾಮಾನ್ಯ ಮಹಿಳೆ, ವಾರ್ಡ್ 15: ಹಿಂದುಳಿದ ವರ್ಗ ಬಿ, ವಾರ್ಡ್ 16: ಸಾಮಾನ್ಯ ಮಹಿಳೆ.

ಸಂಭವನೀಯ ಅಭ್ಯರ್ಥಿಗಳು:

ಬಿಜೆಪಿ: 1ನೇ ವಾರ್ಡ್ - ಶರತ್,

ಬಿಜೆಪಿ: 1ನೇ ವಾರ್ಡ್ - ಶರತ್, ವಾರ್ಡ್ - ಗೌತಮ್ ನೇಮಿರಾಜ್, 10ನೇ ವಾರ್ಡ್ - ರಶೀದ್, 11ನೇ ವಾರ್ಡ್ - ಜಯಲಕ್ಷ್ಮೀ ಚಂದ್ರು, 12ನೇ ವಾರ್ಡ್ - ಕೆ.ಎನ್. ಅಶೋಕ, 13ನೇ ವಾರ್ಡ್ ಜಯಲಕ್ಷ್ಮೀ ನಂಜುಂಡಸ್ವಾಮಿ (ಸದಸ್ಯ ನಂಜುಂಡಸ್ವಾಮಿ ಪತ್ನಿ) 14ನೇ ವಾರ್ಡ್ - ಶಾರದಾ ರೇಣುಕುಮಾರ್, 15ನೇ ವಾರ್ಡ್ ಅಂತಿಮಗೊಂಡಿಲ್ಲ, 16ನೇ ವಾರ್ಡ್ - ಪಾರ್ವತಿ

ಜೆಡಿಎಸ್ ಪಟ್ಟಿ: 1ನೇ ವಾರ್ಡ್ - ಬಿ.ಎಸ್. ಮಂಜುನಾಥ್ (ಹಾಲಿ ಸದಸ್ಯೆ ಕವಿತಾ ಪತಿ) 2ನೇ ವಾರ್ಡ್ - ಭುವನೇಶ್ವರಿ, 3ನೇ ವಾರ್ಡ್ - ಹೆಚ್.ಜೆ. ಸಂತೋಷ್ ಕುಮಾರ್, 4ನೇ ವಾರ್ಡ್ - ಸುರಯ್ಯಾ ಭಾನು (ಹಾಲಿ ಸದಸ್ಯೆ), 5ನೇ ವಾರ್ಡ್ - ಹೆಚ್.ಡಿ. ಚಂದ್ರು (ಹಾಲಿ ಸದಸ್ಯ), 6ನೇ ವಾರ್ಡ್ - ಅಂತಿಮ ಆಗಿಲ್ಲ. 7ನೇ ವಾರ್ಡ್ - ಅಂತಿಮಗೊಂಡಿಲ್ಲ, 8ನೇ ವಾರ್ಡ್ - ಚೈತ್ರಾ, 9ನೇ ವಾರ್ಡ್ - ಕೆ.ಎಸ್. ಮಹೇಶ್, 10ನೇ ವಾರ್ಡ್ - ವಿ.ಎಸ್. ಆನಂದಕುಮಾರ್(ಜೆಡಿಎಸ್ ನಗರಾಧ್ಯಕ್ಷ), 11ನೇ ವಾರ್ಡ್ - ಬಿ. ನಸೀಮಾ, 12ನೇ ವಾರ್ಡ್ ಜಗದೀಶ್, 13ನೇ ವಾರ್ಡ್ - ಹೆಸರು ಅಂತಿಮ ಆಗಿಲ್ಲ, 14ನೇ ವಾರ್ಡ್ - ಕೆ.ವಿ. ನೇತ್ರಾವತಿ, 15ನೇ ವಾರ್ಡ್ - ಗಣೇಶ್ 16ನೇ ವಾರ್ಡ್ - ಮೈಮುನ್ನೀಸಾ

ಈ ನಡುವೆ ಸ್ಥಳೀಯ ಪತ್ರಕರ್ತ ಕೆ.ಎಸ್. ಮೂರ್ತಿ, ಉದ್ಯಮಿ ಕೆ.ಎನ್. ಸುರೇಶ್ ಸೇರಿದಂತೆ ಕೆಲವು ಪ್ರಮುಖರು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲು ಸನ್ನದ್ದರಾಗಿದ್ದಾರೆ.