ಗೋಣಿಕೊಪ್ಪಲು, ಅ. 9: ತಾ. 12 ಮತ್ತು 13 ರಂದು ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ಪೋಷಕ-ಬೋಧಕರ ಸಭೆ ಕರೆಯಲಾಗಿದೆ. 12 ರಂದು ಅಪರಾಹ್ನ 2 ಗಂಟೆಗೆ ಬಿ.ಎ, ಬಿಸಿಎ, ಬಿಬಿಎ ಹಾಗೂ 13 ರಂದು ಬೆಳಿಗ್ಗೆ 10.30 ಕ್ಕೆ ಬಿ.ಕಾಂ ವಿದ್ಯಾರ್ಥಿಗಳ ಪೋಷಕ- ಬೋಧಕರ ಸಭೆ ನಡೆಯಲಿದ್ದು ಪೋಷಕರು ಕಡ್ಡಾಯವಾಗಿ ಸಭೆಗೆ ಆಗಮಿಸಿ ತಮ್ಮ ಮಕ್ಕಳ ಶೈಕ್ಷಣಿಕ ಚಟುವಟಿಕೆ ಹಾಗೂ ಹಾಜರಾತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಪ್ರಾಂಶುಪಾಲರಾದ ಪ್ರೊ.ಎಸ್.ಆರ್. ಉಷಾಲತಾ ತಿಳಿಸಿದ್ದಾರೆ.