ಭಾಗಮಂಡಲ, ಅ. 8: ಕೊಡಗಿನ ಕುಲಮಾತೆ, ದಕ್ಷಿಣ ಗಂಗೆ ಕಾವೇರಿಯ ತೀರ್ಥೋದ್ಭವದೊಂದಿಗೆ ವರ್ಷಂಪ್ರತಿ ಜರುಗಲಿರುವ ತುಲಾಸಂಕ್ರಮಣದ ಜಾತ್ರೆಯನ್ನು ತಾ. 17 ರಂದು ಸುಗಮ ರೀತಿಯಲ್ಲಿ ಆಚರಿಸಲು ಎಲ್ಲರು ಕೈಜೋಡಿಸುವ ಮೂಲಕ; ಸಣ್ಣ ಪುಟ್ಟ ವ್ಯತ್ಯಾಸಗಳನ್ನು ದೊಡ್ಡದು ಮಾಡದೆ ಧಾರ್ಮಿಕ ಕೈಂಕರ್ಯಗಳಲ್ಲಿ ಸಹಭಾಗಿತ್ವ ನೀಡುವಂತೆ, ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಕರೆ ನೀಡಿದರು.ಭಾಗಮಂಡಲದ ಕೇಶಮುಂಡನ ಸಭಾಗೃಹದಲ್ಲಿ ಇಂದು ಜರುಗಿದ ತುಲಾಸಂಕ್ರಮಣ ಜಾತ್ರೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಇಲಾಖಾವಾರು ತಯಾರಿಗಳ ಪರಿಶೀಲನೆಯೊಂದಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಕಾವೇರಿ ತೀರ್ಥೋದ್ಭವದಂತಹ ಅತ್ಯಂತ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮಗಳ ಯಶಸ್ವಿಗಾಗಿ ಸರಕಾರ ಹಾಗೂ ಜಿಲ್ಲಾಡಳಿತದ ಪರವಾಗಿ, ಎಲ್ಲರೂ ಸಹಕಾರ ನೀಡುವಂತೆ ಕಳಕಳಿಯ ನುಡಿಯಾಡಿದರು.ಹೈಟೆಕ್ ಶೌಚಾಲಯ: ಪ್ರಸಕ್ತ ಜಾತ್ರೆಯ ವೇಳೆ ಭಕ್ತರ ಅನುಕೂಲಕ್ಕಾಗಿ ತಾತ್ಕಾಲಿಕ ಶೌಚಾಲಯದೊಂದಿಗೆ, ಅಗತ್ಯ ಮೂಲ ಸೌಕರ್ಯಗಳನ್ನು ಆಯಾ ಇಲಾಖೆಗಳಿಂದ ಕಲ್ಪಿಸಲು ಸೂಚಿಸಿದ ಸಚಿವರು, ಭವಿಷ್ಯದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ತಲಾ ರೂ. 50 ಲಕ್ಷದ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಲಾಗುವದು
(ಮೊದಲ ಪುಟದಿಂದ) ಎಂಬದಾಗಿ ಇದೇ ಸಂದರ್ಭ ಘೋಷಿಸಿದರು.
ಆದ್ಯತೆಗೆ ಆದೇಶ: ತಕ್ಷಣದಿಂದ ಭಾಗಮಂಡಲ-ತಲಕಾವೇರಿಗೆ ತೆರಳುವ ರಸ್ತೆಗಳ ಗುಂಡಿ ಮುಚ್ಚುವದು, ಜಾತ್ರೆಯ ಸಂದರ್ಭ ಪೊಲೀಸ್ ಇಲಾಖೆಯಿಂದ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸುವದು, ಭಾಗಮಂಡಲ ಸಂಗಮ ಕ್ಷೇತ್ರ ಹಾಗೂ ತಲಕಾವೇರಿಯಲ್ಲಿ ಯಾವದೇ ನೂಕುನುಗ್ಗಲಿಗೆ ಅವಕಾಶವಾಗದಂತೆ ಅಗತ್ಯ ಗಮನ ಹರಿಸುವದು, ಉಭಯ ಕಡೆಗಳಲ್ಲಿ ಸಮರ್ಪಕ ಬೆಳಕು ವ್ಯವಸ್ಥೆ, ಜಿಲ್ಲಾ ಕೇಂದ್ರದಿಂದ ಸೂಕ್ತ ಸಾರಿಗೆ ಬಸ್ಗಳ ಸಂಚಾರ ಸೇರಿದಂತೆ ಕ್ಷೇತ್ರಗಳಲ್ಲಿ ಸ್ವಚ್ಛತೆ, ಆರೋಗ್ಯ, ವಾಹನಗಳ ನಿಲುಗಡೆ, ಬರತಕ್ಕಂತಹ ಪ್ರವಾಸಿಗಳು ಹಾಗೂ ಭಕ್ತರಿಗೆ ಸೂಕ್ತ ಮಾರ್ಗದರ್ಶನಕ್ಕೆ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಆದೇಶಿಸಿದರು.
ಅವಲೋಕನ ಸಭೆ: ಪ್ರಸಕ್ತ ಸಾಲಿನಲ್ಲಿ ತಾ. 17 ರಂದು ಸಂಜೆ 6.43ಕ್ಕೆ ಕಾವೇರಿ ತೀರ್ಥೋದ್ಭವವಾಗಲಿದ್ದು, ದೇವಾಲಯ ವ್ಯವಸ್ಥಾಪನಾ ಸಮಿತಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಸಹಿತ ತಮ್ಮನ್ನು ಒಳಗೊಂಡಂತೆ ಜನಪ್ರತಿನಿಧಿಗಳು ಹಾಗೂ ಎಲ್ಲಾ ಇಲಾಖೆಗಳು, ಸಂಘ ಸಂಸ್ಥೆ, ಭಕ್ತರ ಸಹಕಾರದಿಂದ ಸುಗಮ ರೀತಿ ಜಾತ್ರೆಯನ್ನು ಯಶಸ್ಸುಗೊಳಿಸಿ, ಆ ಬಳಿಕ ಆದಷ್ಟು ಬೇಗನೆ ಅವಲೋಕನ ಸಭೆ ನಡೆಸಿ, ಮುಂದೆ ಲೋಪಗಳು ಆಗದಂತೆ ನಿಗಾವಹಿಸುವ ಇಂಗಿತವನ್ನು ಸಚಿವರು ವ್ಯಕ್ತಪಡಿಸಿದರು.
ಪ್ರತಿಷ್ಠೆ ಬೇಡ: ಸಭೆಯಲ್ಲಿ (ಮೊದಲ ಪುಟದಿಂದ) ಎಂಬದಾಗಿ ಇದೇ ಸಂದರ್ಭ ಘೋಷಿಸಿದರು.

ಪ್ರತಿಷ್ಠೆ ಬೇಡ: ಸಭೆಯಲ್ಲಿ ಒಯ್ಯುವ ದಿಸೆಯಲ್ಲಿ ರಥ ಅಥವಾ ಇತರ ವಾಹನಗಳಲ್ಲಿ ಬರುವಂತಹವರಿಗೆ ಭಾರೀ ವಾಹನ (ಲಾರಿ ಇತ್ಯಾದಿ) ನಿರ್ಬಂಧವಿದ್ದು, ಪಿಕಪ್ ಇತ್ಯಾದಿ ಸಣ್ಣ ಪುಟ್ಟ ವಾಹನಗಳು ಮತ್ತು ಬಿಂದಿಗೆ, ಕ್ಯಾನ್ಗಳಲ್ಲಿ ಮಾತ್ರ ತೀರ್ಥ ಕೊಂಡೊಯ್ಯಲು ಅನುವು ಮಾಡಿಕೊಡಲಾಗುವದು ಎಂದು ಅಷ್ಟಮಂಗಲ ಪ್ರಶ್ನೆಯಂತೆ ನಿರ್ಧರಿಸಿರುವದಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾಹಿತಿಯಿತ್ತರು.
ಜಾತ್ರೆಯ ಸುಗಮ ಆಚರಣೆಯೊಂದಿಗೆ ಕುಂದು ಕೊರತೆಗಳು ಎದುರಾಗದಂತೆ ಮುಂಜಾಗ್ರತೆ ವಹಿಸುವ ದಿಸೆಯಲ್ಲಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರೂ ಹಾಗೂ ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮನು ಮುತ್ತಪ್ಪ, ಪ್ರಮುಖರಾದ ಕೊಕ್ಕಲೇರ ಕಾರ್ಯಪ್ಪ, ಹೊಸೂರು ಸತೀಶ್ ಕುಮಾರ್, ರಮೇಶ್ ಜೋಯಪ್ಪ, ಅಮೆ ಬಾಲಕೃಷ್ಣ, ಕುದುಕುಳಿ ಭರತ್, ಕಾಳನ ರವಿ, ತಳೂರು ಕಿಶೋರ್ ಕುಮಾರ್ ಮೊದಲಾದವರು ಸಲಹೆಗಳನ್ನು ನೀಡಿದರು.
ಲೋಕೋಪಯೋಗಿ ಇಲಾಖೆಯ ಇಬ್ರಾಹೀಂ, ಚೆಸ್ಕಾಂನಿಂದ ಸಂಪತ್, ಅಬ್ಕಾರಿ ಇಲಾಖೆಯ ನಾಗೇಶ್, ತಾ.ಪಂ. ಅಧಿಕಾರಿ ಲಕ್ಷ್ಮಿ, ಆರೋಗ್ಯಾಧಿಕಾರಿ ರಾಜೇಶ್, ಅರಣ್ಯಾಧಿಕಾರಿ ನೆಹರು ಮೊದಲಾದವರು ಇಲಾಖಾವಾರು ಮಾಹಿತಿ ನೀಡಿದರು.
ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ, ತಕ್ಕರಾದ ಬೊಳ್ಳಡ್ಕ ಅಪ್ಪಾಜಿ, ಉಪ ವಿಭಾಗಾಧಿಕಾರಿ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ, ತಕ್ಕರಾದ ಬೊಳ್ಳಡ್ಕ ಅಪ್ಪಾಜಿ, ಉಪ ವಿಭಾಗಾಧಿಕಾರಿ.