ಮಡಿಕೇರಿ, ಅ. 7: ಗೋಣಿಕೊಪ್ಪಲು - ಹುದಿಕೇರಿ - ಶ್ರೀಮಂಗಲ, ಕುಟ್ಟ ಮಾರ್ಗವಾಗಿ ಕೇರಳಕ್ಕೆ ಸಂಪರ್ಕ ಕಲ್ಪಿತವಾಗುವ ಅಂತರ್‍ರಾಜ್ಯ ಸಂಪರ್ಕ ರಸ್ತೆಯಲ್ಲಿ ಬರುವ ಪೋಕಳ ತೋಡುವಿನಲ್ಲಿ ರಸ್ತೆ ಕುಸಿತದಿಂದಾಗಿ ಹಲವಷ್ಟು ಸಮಯ ಮಡಿಕೇರಿ, ಅ. 7: ಗೋಣಿಕೊಪ್ಪಲು - ಹುದಿಕೇರಿ - ಶ್ರೀಮಂಗಲ, ಕುಟ್ಟ ಮಾರ್ಗವಾಗಿ ಕೇರಳಕ್ಕೆ ಸಂಪರ್ಕ ಕಲ್ಪಿತವಾಗುವ ಅಂತರ್‍ರಾಜ್ಯ ಸಂಪರ್ಕ ರಸ್ತೆಯಲ್ಲಿ ಬರುವ ಪೋಕಳ ತೋಡುವಿನಲ್ಲಿ ರಸ್ತೆ ಕುಸಿತದಿಂದಾಗಿ ಹಲವಷ್ಟು ಸಮಯ ಬರುತ್ತಿದೆ. ಈ ಸೇತುವೆ ಪ್ರಸ್ತುತ ಅಪಾಯಕಾರಿಯಾಗುತ್ತಿದ್ದು, ಸೇತುವೆಯ ಒಂದು ಬದಿಯಲ್ಲಿ ತೂತಾಗಿ ತಳಭಾಗ ಕಾಣುತ್ತಿದೆ. ಮೊನ್ನೆ ಮೊನ್ನೆಯಷ್ಟೆ ಪೋಕಳತೋಡು ಜಾಗ ಸಂಚಾರಕ್ಕೆ ಮುಕ್ತವಾಗಿದ್ದು, ಇದೀಗ ಈ ಹೊಸ ಸಮಸ್ಯೆ ಎದುರಾಗುತ್ತಿದೆ. ಇದರೊಂದಿಗೆ ಗೋಣಿಕೊಪ್ಪಲುವಿನಿಂದ ಕುಟ್ಟದ ತನಕವೂ ಹೆದ್ದಾರಿಯ ಉದ್ದಗಲಕ್ಕೂ ಹಳ್ಳ - ಕೊಳ್ಳಗಳು ನಿರ್ಮಾಣವಾಗಿವೆ. ಭಾರೀ ಗುಂಡಿಗಳಾಗಿರುವದರಿಂದ ಈ ರಸ್ತೆಯನ್ನು ಮರುಡಾಂಬರೀಕರಣವೇ ಮಾಡಬೇಕಾಗಿದೆ ಎಂದು ಸ್ಥಳೀಯರು ಪತ್ರಿಕೆಯೊಂದಿಗೆ ತಿಳಿಸಿದ್ದಾರೆ.

ಇದರೊಂದಿಗೆ ಅರಣ್ಯ ಇಲಾಖೆ ವನ್ಯಜೀವಿಗಳ ಹಿತದೃಷ್ಟಿಯಿಂದ ಬಂಡಿಪುರ ಹೆದ್ದಾರಿಯನ್ನು ಸಂಜೆ 6 ರಿಂದ ಬೆಳಿಗ್ಗೆ 6ರತನಕ ಬಂದ್ ಮಾಡುವದರಿಂದ ಈ ಪೂಜೆಕಲ್ಲು ಮಾರ್ಗದ ರಸ್ತೆಯೇ ಪರ್ಯಾಯ ಮಾರ್ಗವೂ ಆಗಿದೆ. ಕೇರಳಕ್ಕೆ ಸಂಪರ್ಕ ಕಲ್ಪಿಸುವ ಈ ರಾಜ್ಯ ಹೆದ್ದಾರಿಯಲ್ಲಿ ರಾತ್ರಿಯ ಸಮಯದಲ್ಲಿ ಭಾರೀ ಸಾಮಥ್ರ್ಯದ ಲಾರಿಗಳ ಓಡಾಟವೂ ಹೆಚ್ಚಾಗಿ ಕಂಡು ಬರುತ್ತಿದ್ದು, ಸೇತುವೆಯೇ ಕುಸಿಯುವ ಅಪಾಯ ವಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ, ಸಂಬಂಧಿಸಿದವರು ತುರ್ತು ಗಮನ ಹರಿಸುವದು ಅತ್ಯಗತ್ಯವಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.