ಕೂಡಿಗೆ, ಅ. 6: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದ ಶ್ರೀ ಮಹಾದೇವಿಯ ಸನ್ನಿಧಿಯಲ್ಲಿ ತಾ. 10 ರಿಂದ 18ರ ವರೆಗೆ ನವರಾತ್ರಿ ಪೂಜಾ ಕಾರ್ಯ ನಡೆಯಲಿವೆ.

ಸಂಜೆ 7 ರಿಂದ 8.30ರ ವರೆಗೆ ದೇವಿಯ ಸನ್ನಿಧಿಯಲ್ಲಿ ಶ್ರೀ ಲಲಿತಾ ಸಹಸ್ರನಾಮ ಪಾರಾಯಣದೊಂದಿಗೆ ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಭಕ್ತರ ಸಮ್ಮುಖದಲ್ಲಿ ನೆರವೇರಲಿವೆ. ಸಂಗೀತ ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಮಾಡಲಾಗವದು.

ತಾ. 16 ರಂದು ಗಣಪತಿ ಹೋಮ, ಮೃತ್ಯುಂಜಯ ಹೋಮ, ಚಂಡಿಕಾ ಹೋಮ-ಹವನಗಳು ನಡೆಯಲಿವೆ ಎಂದು ಉಮಾಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಚಾಮಿ, ಕಾರ್ಯರ್ಶಿ ಬಿ.ಎಲ್. ಸುರೇಶ್ ತಿಳಿಸಿದ್ದಾರೆ.