ಗೋಣಿಕೊಪ್ಪಲು, ಅ. 6: ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು ಭೇಟಿ ಮಾಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಲಿಖಿತ ಮನವಿ ಸಲ್ಲಿಸಲಾಯಿತು.
ಜಿಲ್ಲಾಡಳಿತದ ಕಚೇರಿಯಲ್ಲಿ ಭೇಟಿ ಮಾಡಿದ ರೈತ ಮುಖಂಡರು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ತೊಂದರೆಗೀಡಾದ ವಿಚಾರದಲ್ಲಿ ಚರ್ಚೆ ನಡೆಸಿ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು, ನೊಂದ ರೈತರಿಗೆ ನ್ಯಾಯ ನೀಡಬೇಕೆಂದು ಮನವಿ ಸಲ್ಲಿಸಿದರು.
ಕೊಡಗಿನ ಪ್ರಕೃತಿ ವಿಕೋಪದಿಂದ ನೊಂದ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸುವ ಪಟ್ಟಿಯಲ್ಲಿ ಲೋಪದೋಷ, ಕೊಡಗಿನಲ್ಲಿ ಪ್ರವಾಸಿಗರ ನಿಷೇಧ ಮತ್ತು ಗೋಣಿಕೊಪ್ಪಲು, ಅ. 6: ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು ಭೇಟಿ ಮಾಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಲಿಖಿತ ಮನವಿ ಸಲ್ಲಿಸಲಾಯಿತು.
ಜಿಲ್ಲಾಡಳಿತದ ಕಚೇರಿಯಲ್ಲಿ ಭೇಟಿ ಮಾಡಿದ ರೈತ ಮುಖಂಡರು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ತೊಂದರೆಗೀಡಾದ ವಿಚಾರದಲ್ಲಿ ಚರ್ಚೆ ನಡೆಸಿ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು, ನೊಂದ ರೈತರಿಗೆ ನ್ಯಾಯ ನೀಡಬೇಕೆಂದು ಮನವಿ ಸಲ್ಲಿಸಿದರು.
ಕೊಡಗಿನ ಪ್ರಕೃತಿ ವಿಕೋಪದಿಂದ ನೊಂದ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸುವ ಪಟ್ಟಿಯಲ್ಲಿ ಲೋಪದೋಷ, ಕೊಡಗಿನಲ್ಲಿ ಪ್ರವಾಸಿಗರ ನಿಷೇಧ ಮತ್ತು ಜಾಗ ನೀಡಬೇಕು. ಆಸ್ತಿ ಹಾಗೂ ಮನೆ ಕಳೆದುಕೊಂಡವರ ವಿವರಗಳು ಪಟ್ಟಿಯಲ್ಲಿ ಅವರ ಹೆಸರು ಮಾತ್ರವಿದ್ದು ವಿಳಾಸ, ವಾಸವಿದ್ದ ಮನೆ ನಂ, ಆಸ್ತಿ ಸರ್ವೇ ನಂ. ಹಾಗೂ ಆಸ್ತಿಯ ವಿಸ್ತೀರ್ಣ ಮತ್ತು ಕಳೆದುಕೊಂಡ ಸಾಮಗ್ರಿಗಳು, ಬೆಳೆನಾಶ, ಚಿನ್ನಾಭರಣ ಮತ್ತು ದಾಸ್ತಾನು ಮಾಡಿದಂತಹ ಭತ್ತ, ಕಾಫಿ, ಕರಿಮೆಣಸು ಪಟ್ಟಿಯಲ್ಲಿ ಕಾಣದಿರುವದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದ ಪುನರ್‍ವಸತಿ ಹಾಗೂ ರಸ್ತೆ ಕಾಮಗಾರಿಗಳು ಇನ್ನೂ ಭರದಿಂದ ನಡೆಯುತ್ತಿರುವದರಿಂದ ಪ್ರವಾಸಿಗರನ್ನು ಜಿಲ್ಲೆಗೆ ಆಗಮಿಸುವದನ್ನು ಇನ್ನಷ್ಟು ಸಮಯಕ್ಕೆ ನಿಷೇಧಿಸಬೇಕು.
ತಲಕಾವೇರಿಯಲ್ಲಿ ನಡೆಯುವ ‘ತೀರ್ಥೋದ್ಬವ’ ಉತ್ಸವದಂದು ಜಿಲ್ಲೆಯ ಮೂಲ ನಿವಾಸಿ ರೈತರ ಸಂಪ್ರದಾಯದಂತೆ ‘ಪತ್ತಲೋದಿ’ಯವರೆಗೆ (ಅಂದರೆ ತಾ. 17 ರಿಂದ 27ರ ವರೆಗೆ) ಪ್ರವಾಸಿಗರನ್ನು ನಿಷೇಧಿಸಿ ಅವರ ಕರ್ಮಕಾರ್ಯವನ್ನು ಮಾಡಲು ಅನುವು ಮಾಡಿಕೊಡಬೇಕು. ಭಾಗಮಂಡಲ ತಲಕಾವೇರಿ ‘ದೇವರ ಸನ್ನಿಧಿ’ ಅಥವಾ ‘ದೇವಾಲಯ’ ಎಂದು ಪರಿಗಣಿಸಿ ಯಾತ್ರಾರ್ಥಿಗಳು
ಶುಚಿತ್ವ ಹಾಗೂ ಆಡಳಿತ ಮಂಡಳಿಯ ಕಾನೂನನ್ನು ಪಾಲಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಕೊಡಗಿನ ಪ್ರಕೃತಿ ಸೌಂದರ್ಯವನ್ನು ಕಾಪಾಡಲು ಜಿಲ್ಲಾಡಳಿತ ಕಟ್ಟುನಿಟ್ಟಾದ ಕ್ರಮಕ್ಕೆ ಮುಂದಾಗಬೇಕು. ಮಳೆಯಿಂದ ಹಾನಿಯಾದ ಆಸ್ತಿ ಬೆಳೆಗಳ ಪರಿಹಾರ ಹಣವು ಇನ್ನೂ ರೈತರಿಗೆ ವಿತರಣೆ ಆಗದಿರುವದು ಕಂಡು ಬಂದಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು.
ರೈತರ ಸಂಪೂರ್ಣ ಸಾಲ ಮನ್ನಾ, ಹೊಸ ಸಾಲ ಎಕರೆಗೆ ರೂ. 1 ಲಕ್ಷದಂತೆ ಬಡ್ಡಿರಹಿತವಾಗಿ ವಿತರಿಸಲು ಕ್ರಮಕೈಗೊಳ್ಳಬೇಕು. ಜಿಲ್ಲೆಯಲ್ಲಿ ‘ಭತ್ತ ಖರೀದಿ ಕೇಂದ್ರ’ ತೆರೆಯಲು ಕ್ರಮಕ್ಕೆ ಮುಂದಾಗಬೇಕು. ಗೋಣಿಕೊಪ್ಪಲು ಆರ್.ಎಂ.ಸಿ.ಯಲ್ಲಿ ಇರುವ ಗೋದಾಮುಗಳನ್ನು ಆದ್ಯತೆ ಮೇರೆಗೆ ರೈತರಿಗೆ ನೀಡಬೇಕು. ರೈತ ಭವನವನ್ನು ರೈತರಿಗೆ ನೀಡಲು ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದರು.
ಭೇಟಿಯ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಮುಖಂಡರಾದ ಮಂಡೇಪಂಡ ಪ್ರವೀಣ್, ಪುಚ್ಚಿಮಾಡ ಸುಭಾಶ್, ಪೊನ್ನಪ್ಪ, ಟಿ.ಕೆ. ರಾಜ, ಎಂ.ಜಿ. ಗಿರೀಶ್, ಎಂ.ಎನ್. ಅಶೋಕ್ ಮುಂತಾದವರು ಉಪಸ್ಥಿತರಿದ್ದರು.