ಮಡಿಕೇರಿ, ಅ. 6: ಶಿಕ್ಷಕರ ದಿನಾಚರಣೆಯ ಅಂಗವಾಗಿ ವೀರಾಜಪೇಟೆ ಲಯನ್ಸ್ ಕ್ಲಬ್ ಕಟ್ಟಡದಲ್ಲಿ ಕ್ಲಬ್‍ನ ವತಿಯಿಂದ ನಿವೃತ್ತ ಶಿಕ್ಷಕ ಪೂಳಂಡ ರಾಮು ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಅಧ್ಯಕ್ಷ ಬೊಪ್ಪಂಡ ತ್ರಿಶು ಗಣಪತಿ, ಮಾಜಿ ಅಧ್ಯಕ್ಷ ಪಟ್ಟಡ ವಿಕ್ರಂ ಚಂಗಪ್ಪ, ಖಜಾಂಚಿ ನಿಯಾಝ್, ಹಿರಿಯ ಸದಸ್ಯ ಕರ್ನಂಡ ಸೋಮಯ್ಯ ಉಪಸ್ಥಿತರಿದ್ದರು.