ಶ್ರೀಮಂಗಲ, ಅ. 6: ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾ ಸಂಸ್ಥೆಯ ಅಚ್ಚು ಮೆಚ್ಚಿನ ವಿದ್ಯಾರ್ಥಿನಿ ಅಕಾಲಿಕವಾಗಿ ನಿಧನರಾಗಿದ್ದು, ವಿದ್ಯಾ ಸಂಸ್ಥೆ ಆಡಳಿತ ಮಂಡಳಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ, ವಿದ್ಯಾ ಸಂಸ್ಥೆಯ ಆವರಣದಲ್ಲಿ ಮ್ಯಾಂಗೋ ಸ್ಟೈನ್ ಎಂಬ ಹಣ್ಣುಗಿಡ ನೆಟ್ಟು ಜಸೀಲ ನಮ್ಮೊಂದಿಗೆ ಶಾಶ್ವತ ವಾಗಿರಲಿ ಎಂದು ಕಂಬನಿ ಮಿಡಿದಿದ್ದಾರೆ.

ಬೇಗೂರು ಸಮೀಪ ಮಾಪಿಳೆ ತೋಡು ನಿವಾಸಿ ಎ.ಪಿ.ಆಲಿ ಮತ್ತು ತಾಜ್ ಬಿ ದಂಪತಿಯ ಪುತ್ರಿ, ಜಸೀಲ ಸಾಯಿ ಶಂಕರ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅಂತಿಮ ವರ್ಷದ ಬಿ.ಕಾಂ.ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಹಲವು

ಶ್ರೀಮಂಗಲ, ಅ. 6: ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾ ಸಂಸ್ಥೆಯ ಅಚ್ಚು ಮೆಚ್ಚಿನ ವಿದ್ಯಾರ್ಥಿನಿ ಅಕಾಲಿಕವಾಗಿ ನಿಧನರಾಗಿದ್ದು, ವಿದ್ಯಾ ಸಂಸ್ಥೆ ಆಡಳಿತ ಮಂಡಳಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ, ವಿದ್ಯಾ ಸಂಸ್ಥೆಯ ಆವರಣದಲ್ಲಿ ಮ್ಯಾಂಗೋ ಸ್ಟೈನ್ ಎಂಬ ಹಣ್ಣುಗಿಡ ನೆಟ್ಟು ಜಸೀಲ ನಮ್ಮೊಂದಿಗೆ ಶಾಶ್ವತ ವಾಗಿರಲಿ ಎಂದು ಕಂಬನಿ ಮಿಡಿದಿದ್ದಾರೆ.

ಬೇಗೂರು ಸಮೀಪ ಮಾಪಿಳೆ ತೋಡು ನಿವಾಸಿ ಎ.ಪಿ.ಆಲಿ ಮತ್ತು ತಾಜ್ ಬಿ ದಂಪತಿಯ ಪುತ್ರಿ, ಜಸೀಲ ಸಾಯಿ ಶಂಕರ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅಂತಿಮ ವರ್ಷದ ಬಿ.ಕಾಂ.ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಹಲವು ತಿಳಿಹೇಳುತ್ತಾ ಧೈರ್ಯ ತುಂಬಿದ್ದರು.

ಹಲವು ಸಮಯದಿಂದ ಕಿಡ್ನಿ ವೈಫಲ್ಯಕ್ಕೆ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ಜಸೀಲಳಿಗೆ, ಕಿಡ್ನಿ ಕಸಿ ಮಾಡಿಸಲು ಪೋಷಕರು ಚಿಂತಿಸಿ, ಅದಕ್ಕೆ ತನ್ನ ತಾಯಿಯ ಕಿಡ್ನಿ ಸರಿ ಹೊಂದುತ್ತಿದ್ದು, ತಾಯಿ ತಾಜ್‍ಬಿ ಅವರು ಬಾಳಿ ಬದುಕಬೇಕಾದ ತನ್ನ ಮಗಳಿಗೆ ಕಿಡ್ನಿ ನೀಡಿದ್ದರು. ಯಶಸ್ವಿಯಾಗಿ, ಕಸಿ ನಡೆಯಿತು. ಆದರೇ, ಕಿಡ್ನಿ ಕಸಿಯಲ್ಲಿ ಉಂಟಾದ ಸಮಸ್ಯೆಯಿಂದ ಜಸೀಲ ತಾ. 1. 7.2018 ರಂದು ಅಕಾಲಿಕವಾಗಿ ನಿಧನರಾದರು.

ಲಕ್ಷಾಂತರ ರೂ. ಖರ್ಚು ಮಾಡಿದರೂ ತಮ್ಮ ಪ್ರೀತಿಯ ಮಗಳನ್ನು ಉಳಿಸಿ ಕೊಳ್ಳಲು ಆಗಲಿಲ್ಲ... ಇದೀಗ ತಮ್ಮ ಅಚ್ಚು ಮೆಚ್ಚಿನ ವಿದ್ಯಾರ್ಥಿನಿಯನ್ನು ಕಳೆದು ಕೊಂಡ ಸಾಯಿ ಶಂಕರ ವಿದ್ಯಾಸಂಸ್ಥೆ ಮುಖ್ಯ ಕಚೇರಿ ಸಮೀಪವೇ ಜಸೀಲಳ ನೆನಪಿಗೆ ಮ್ಯಾಂಗೋ ಸ್ಟೈನ್ ಎಂಬ ಹಣ್ಣುಗಿಡ ನೆಟ್ಟು, ದಿನನಿತ್ಯ ನೆನಪಿಸಿಕೊಳ್ಳುತ್ತಿದೆ. ಮುಂದೆಯೂ ಜಸೀಲಳ ನೆನಪು ಶಾಶ್ವತವಾಗಿರಲು ಅವಳ ಹೆಸರಲ್ಲಿ ವಿಶೇಷವಾದ ಹಣ್ಣುಗಿಡವನ್ನು ನೆಟ್ಟು, ನೀರು ಹಾಕಿ ಪೋಷಿಸಲಾಗುತ್ತಿದೆ. ಆವರಣದಲ್ಲಿರುವ ಮ್ಯಾಂಗೋ ಸ್ಟೈನ್ ಹೆಸರಲ್ಲಿ ಜಸೀಲ ಇವರೆಲ್ಲರ ನೆನಪಲ್ಲಿ ಉಳಿದಿದ್ದಾಳೆ.

- ಅಣ್ಣೀರ ಹರೀಶ್ ಮಾದಪ್ಪ