ಗೋಣಿಕೊಪ್ಪಲು, ಅ. 6: ಇಲ್ಲಿನ ಕಾವೇರಿ ಪದವಿ ಕಾಲೇಜಿನ ರಾಜ್ಯಶಾಶ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಎಂ.ಡಿ. ಅಕ್ಕಮ್ಮ ಸೆಪ್ಟಂಬರ್ 30 ರಂದು ನಿವೃತ್ತಿಯೊಂದಿದ್ದು, ಇವರಿಗೆ ಕಾವೇರಿ ಕಾಲೇಜು ಸಿಬ್ಬಂದಿ ಹಾಗೂ ಬಿ.ಎ ವಿಭಾಗದ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ನೀಡಲಾಯಿತು. ಪ್ರೊ. ಎಂ.ಡಿ. ಅಕ್ಕಮ್ಮ 1983ರಲ್ಲಿ ಕಾವೇರಿ ಕಾಲೇಜಿನ ಪ್ರಾಧ್ಯಾಪಕಿಯಾಗಿ ನೇಮಕಗೊಂಡು ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ.