ನಾಪೆÇೀಕ್ಲು, ಆ. 6: ವ್ಯಕ್ತಿಯೊಬ್ಬರು ವಿಷ ಸೇವಿಸಿ, ನಂತರ ಕೋವಿಯಿಂದ ತನ್ನ ಎದೆಗೆ ಗುಂಡು ಹಾರಿಸಿಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಸಮೀಪದ ಪಾರಾಣೆ ಕೋಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಲಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಗ್ರಾಮದ ಪೆÇನ್ನಚ್ಚನ ಸೋಮಯ್ಯ (66) ತಮ್ಮ ತೋಟದಲ್ಲಿ ವಿಷ ಸೇವಿಸಿ, ನಂತರ ಗುಂಡು ಹಾರಿಸಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ದುರ್ದೈವಿ.
ಘಟನೆ ವಿವರ: ಮೃತ ಸೋಮಯ್ಯ ತನ್ನ ಪತ್ನಿ ನಿವೃತ್ತ ಶಿಕ್ಷಕಿ ರುಕ್ಮಿಣಿ ಮತ್ತು ಮಗ ತಿಲಕ್ ಮತ್ತು ಸೊಸೆಯೊಂದಿಗಿನ ಮನಸ್ತಾಪದಿಂದ ಮೂರ್ನಾಡುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 2016ರಲ್ಲಿ ಸೋಮಯ್ಯ ಮೂರ್ನಾಡುವಿನಿಂದ ಸಂಜೆ ತನ್ನ ಬಾವಲಿಯ ಮನೆಗೆ ಕೋವಿಯೊಂದಿಗೆ ಆಗಮಿಸಿ ಟಿವಿ ವೀಕ್ಷಿಸುತ್ತಿದ್ದ ಪತ್ನಿ ರುಕ್ಮಿಣಿಗೆ ಕಿಟಕಿಯ ಮೂಲಕ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ನಂತರ ಒಂದೂವರೆ ವರ್ಷಗಳ ಕಾಲ ಜೈಲಿನಲ್ಲಿದ್ದರು. ನಂತರ ಮಗ ತಿಲಕ್ ಜೀವನದಲ್ಲಿ ಜಿಗುಪ್ಸೆ ಹೊಂದಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದರು. ಬಳಿಕ ಸೊಸೆ ಮತ್ತು ಮೊಮ್ಮಗು ನಾಪೆÇೀಕ್ಲುವಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜೈಲಿನಿಂದ ಆಗಮಿಸಿದ ಸೋಮಯ್ಯ ಮಾತ್ರ ಬಾವಲಿಯ ಮನೆಯಲ್ಲಿ ವಾಸವಾಗಿದ್ದರು ಎಂದು ಪೆÇಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ನಂಜುಂಡ ಸ್ವಾಮಿ ಮತ್ತು ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.