ಕುಶಾಲನಗರ, ಅ. 6: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಶಾಲನಗರ ವಲಯದ ನಂಜರಾಯಪಟ್ಟಣ ಕಾರ್ಯಕ್ಷೇತ್ರದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ಸೆಲ್ಕೋ ಸೋಲಾರ್ ಅಳವಡಿಕೆ ಮಾಡಿರುವ ಸದಸ್ಯರುಗಳಿಗೆ ಸಹಾಯಧನ ವಿತರಣೆ ಮಾಡಲಾಯಿತು.
ಗಾಂಧಿ ಜಯಂತಿ ಅಂಗವಾಗಿ ನಂಜರಾಯಪಟ್ಟಣ ಸ್ತ್ರಿಶಕ್ತಿ ಭವನದಲ್ಲಿ ಗ್ರಾಪಂ ಅಧ್ಯಕ್ಷೆ ಜೈನಬಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪಂಚಾಯಿತಿ ಸದಸ್ಯ ಟಿ.ಕೆ. ಸುಮೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಯೋಜನೆಯ ಸೌಲಭ್ಯಗಳು ಸಮಾಜಕ್ಕೆ ದಾರಿ ದೀಪವಾಗಿದೆ. ಬಡ ಕುಟುಂಬಗಳಿಗೆ ಆಶಾಕಿರಣವಾಗಿದ್ದು ಮತ್ತಷ್ಟು ಜನಪರ ಯೋಜನೆಗಳು ಜಾರಿಗೊಳ್ಳಲಿ ಎಂದರು.
ಕಾರ್ಯಕ್ರಮದಲ್ಲಿ ಸೋಲಾರ್ ಅಳವಡಿಕೆ ಮಾಡಿದ 31 ಸದಸ್ಯರುಗಳಿಗೆ ತಲಾ 500 ರೂ.ಗಳ ಸಹಾಯಧನ ವಿತರಿಸಲಾಯಿತು.
ಯೋಜನೆಯ ಮೇಲ್ವಿಚಾರಕ ಕೆ.ಹರೀಶ್, ಕೃಷಿ ಅಧಿಕಾರಿ ಗೀತಾ, ಒಕ್ಕೂಟದ ಅಧ್ಯಕ್ಷೆ ಭೋಜಮ್ಮ, ಸೇವಾ ಪ್ರತಿನಿಧಿ ಬ್ರಿಜಿಟ್ ಲಿಲ್ಲಿ ಇದ್ದರು.