ಮಡಿಕೇರಿ, ಅ. 6: ನಗರದ ಕೊಡಗು ವಾಣಿಜ್ಯ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಬೆರಳಚ್ಚು, ಶ್ರೀಘ್ರಲಿಪಿ ಮತ್ತು ಕಂಪ್ಯೂಟರ್‍ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬೆರಳಚ್ಚು ವಿಭಾಗದಲ್ಲಿ ಶೇ. 80, ಶ್ರೀಘ್ರಲಿಪಿ ವಿಭಾಗದಲ್ಲಿ ಶೇ. 95, ಕಂಪ್ಯೂಟರ್ ವಿಭಾಗದಲ್ಲಿ ಶೇ. 90 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.
ಬೆರಳಚ್ಚು ವಿಭಾಗದಲ್ಲಿ ಯಶಸ್ವಿನಿ ಕೆ.ಎಸ್. ಶೇ. 93, ಸ್ವೀತಾ ಎನ್.ಸಿ. ಶೇ. 88, ಲಿಖಿತ ಬಿ.ಯು. ಶೇ.86 ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಶ್ರೀಘ್ರಲಿಪಿ ವಿಭಾಗದಲ್ಲಿ ಶೋಭ ಎಸ್.ಪಿ. ಶೇ. 70, ಪೂಜ ಹೊಸೂರು ಶೇ. 80, ಸುಮ ಎಚ್.ಕೆ. ಶೇ. 70, ಪಾವನ ಬಿ.ಎಂ. ಶೇ. 75 ಅಂಕವನ್ನು ಪಡೆದುಕೊಂಡಿದ್ದಾರೆ. ಜನವರಿ 2019 ಮಾಹೆಯಲ್ಲಿ ನಡೆಯಲಿರುವ ಪರೀಕ್ಷೆಗೆ ಹಣ ಪಾವತಿಸಲು ತಾ. 20 ಕೊನೆಯ ದಿನವಾಗಿದೆ ಎಂದು ಪರೀಕ್ಷಾ ಮಂಡಳಿಯು ತಿಳಿಸಿದ್ದಾರೆ.