ಮಡಿಕೇರಿ, ಅ. 5: ಪ್ರಾದೇಶಿಕ ಜನ ಸಂಪರ್ಕ ಕಾರ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಯ ನವದೆಹಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿಯ ಸಹಯೋಗದೊಂದಿಗೆ ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಪಾಜೆ ಅಂಗನವಾಡಿ ಕೇಂದ್ರ, ಸಂಪಾಜೆ ನಿರಾಶ್ರಿತರ ಕೇಂದ್ರದಲ್ಲಿ ಪೋಷಣಮಾಸ ಅಭಿಯಾನದಡಿ ಬೀದಿ ನಾಟಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ, ಅಂಗನವಾಡಿ ದಿನಾಚರಣೆ, ಮಾತೃಪೂರ್ಣ ದಿನಾಚರಣೆ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನೆರವೇರಿದವು.

ನಿತ್ಯ ಸ್ನೇಹಿ ಕಲಾತಂಡ ಮಂಡ್ಯ ಕಲಾವಿದರಾದ ನಾಗರಾಜು, ಶೇಖರ್, ಬಸವರಾಜು, ಶಿವಕುಮಾರ್, ಬಂದೇಶ್, ಸ್ವಾಮಿ, ರೋಜ್‍ಮೇರಿ, ಮೀನಾಕ್ಷಿ ಇವರುಗಳು ಪೌಷ್ಟಿಕ ಆಹಾರದ ಮಹತ್ವ, ಸಾಮಾಜಿಕ ಪಿಡುಗುಗಳ ಬಗ್ಗೆ ಅರಿವು, ಇಲಾಖಾ ಯೋಜನೆಗಳ ಸಧ್ಬಳಕೆ ಬಗ್ಗೆ, ಸ್ವಚ್ಛತೆಯ ಕುರಿತು ಬೀದಿನಾಟಕದ ಮೂಲಕ ಅರಿವು ಮೂಡಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಂಡಂಡ ಸವಿತಾ ಕೀರ್ತನ್‍ರವರು ತಮಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಲಾಖೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಚೆಂಬು ಕಾರ್ಯಕ್ರಮದಲ್ಲಿ ಚೆಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಧವ ಪೂವಯ್ಯ ಮಜಲು, ಉಪಾಧ್ಯಕ್ಷೆ ವನಿತಾ, ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಕೆ.ಜಿ. ರಾಜರಾಮ, ಸಂಸ್ಥೆಯ ಸಂಚಾಲಕ ಎಂ. ಶಂಕರನಾರಾಯಣ ಭಟ್, ಪ್ರಾಂಶುಪಾಲೆ ವೈ.ಕೆ. ಮಾಲತಿ, ಮುಖ್ಯ ಶಿಕ್ಷಕ ಐತಪ್ಪ, ಪತ್ರಕರ್ತ ಲೋಕೇಶ್ ಗುಡ್ಡೆಮನಿ ಇವರು ಉಪಸ್ಥಿತರಿದ್ದರು. ಗುರು ಪುರುಷ ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರಾದ ಸತ್ಯವತಿ, ಕುಸುಮಾವತಿ ಹಾಗೂ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ದಮಯಂತಿ ಕಾರ್ಯಕ್ರಮದ ಆಯೋಜನೆಗೆ ಶ್ರಮಿಸಿದರು.