ಮಡಿಕೇರಿ, ಅ. 5: ಭಾಗಮಂಡಲ-ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ಧಿನಿ ದೇವಸ್ಥಾನದ ವತಿಯಿಂದ ಪ್ರಕೃತಿ ವಿಕೋಪದಿಂದ ನೊಂದ ಕುಟುಂಬಗಳಿಗೆ ಸಹಾಯಧನ ನೀಡಲಾಯಿತು.
ಈ ವರ್ಷ ಊರಿನಲ್ಲಿ ಸರಳವಾಗಿ ಕೈಲ್ ಮುಹೂರ್ತ ಮತ್ತು ಗಣೇಶೋತ್ಸವವನ್ನು ಆಚರಿಸಿ, ಉಳಿದ ಹಣವನ್ನು ಮತ್ತು ದೇವಸ್ಥಾನದ ವತಿಯಿಂದ ತಾಳತ್‍ಮನೆ ಸಾಂತ್ವನ ಕೇಂದ್ರದಲ್ಲಿರುವ 20 ಕುಟುಂಬಗಳಿಗೆ ದೇವಸ್ಥಾನದ ಅಧ್ಯಕ್ಷ ಹೊಸಗದ್ದೆ ಎ. ಭಾಸ್ಕರ್ ಅವರು ಧನ ಸಹಾಯ ವಿತರಿಸಿದರು. ಈ ಸಂದರ್ಭ ದೇವಸ್ಥಾನದ ಕಾರ್ಯದರ್ಶಿ ಗೌಡುದಾರೆ ಜಿ. ಯದುಕುಮಾರ್, ನಿರ್ದೇಶಕ ಹೊಸಗದ್ದೆ ಎಂ. ಕುಮಾರ್ ಮತ್ತು ಗಣೇಶೋತ್ಸವ ಹಾಗೂ ಕೈಲ್ ಮುಹೂರ್ತ ಸಮಿತಿ ಹೊಸಗದ್ದೆ ವೆಂಕಟರಮಣ ಕಾರ್ಯದರ್ಶಿ ಬಾರಿಕೆ. ಎ. ತೀರ್ಥಕುಮಾರ್ ಹಾಜರಿದ್ದರು.
 
						