ಮಡಿಕೇರಿ, ಅ. 5 : ಮಡಿಕೇರಿಯ ಕಾನ್ವೆಂಟ್ ರಸ್ತೆಯ ಶ್ರೀ ಚಾಮುಂಡೇಶ್ವರಿ ಸ್ವಸಹಾಯ ಸಂಘದಿಂದ ಕಾನ್ವೆಂಟ್ ರಸ್ತೆಯ ಆಸುಪಾಸಿನ ದಾನಿಗಳಿಂದ ಸಂಗ್ರಹಿಸಲ್ಪಟ್ಟ ರೂ. 23,300ನ್ನು ಕೊಡಗಿನಲ್ಲಿ ಇತ್ತೀಚೆಗೆ ನಡೆದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾದ ಸೀನ ಮತ್ತು ಲತಾ ದಂಪತಿಗಳಿಗೆ ವಿತರಿಸಲಾಯಿತು. ಸಭೆಯಲ್ಲಿ ಸಂದರ್ಭ ಸಂಘದ ಅಧ್ಯಕ್ಷೆÀ ತಾರಾ ರೈ ,ಉಪಾಧ್ಯಕ್ಷೆ ಇಂದಿರಾವತಿ ಕೆ.ಎ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.