ಮಡಿಕೇರಿ, ಅ. 5: ಮಡಿಕೇರಿ ನಗರ ಪೊಲೀಸ್ ವೃತ್ತನಿರೀಕ್ಷಕರಾಗಿ ಅನೂಪ್ ಮಾದಪ್ಪ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಎಸ್‍ಐ ಆಗಿಯೂ ಕಾರ್ಯನಿರ್ವಹಿಸಿರುವ ಅನೂಪ್ ಅವರು ಈ ಹಿಂದೆ ವೃತ್ತ ನಿರೀಕ್ಷಕರಾಗಿ ಬಡ್ತಿ ಹೊಂದಿದ್ದು, ಗುಪ್ತದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೊಡಗು ಹಾಗೂ ಹಾಸನ ಜಿಲ್ಲೆಯ ಉಸ್ತುವಾರಿಯನ್ನೂ ಹೊಂದಿದ್ದ ಮೂಲತಃ ಕೊಡಗಿನವರಾದ ಪೆಮ್ಮಚ್ಚಂಡ ಅನೂಪ್ ಮಾದಪ್ಪ ಅವರನ್ನು ಇದೀಗ ನಗರ ಠಾಣೆಗೆ ನಿಯೋಜಿಸಲಾಗಿದೆ. ಈ ತನಕ ನಗರ ವೃತ್ತ ನಿರೀಕ್ಷಕರಾಗಿ ಐ.ಪಿ. ಮೇದಪ್ಪ ಕತರ್Àವ್ಯ ನಿರ್ವಹಿಸುತ್ತಿದ್ದರು.