ಒಡೆಯನಪುರ, ಅ. 5: ರೋಟರಿ ಸಂಸ್ಥೆಯು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದು, ಸಮಾಜ ಸೇವೆಯಲ್ಲಿ ಜವಾಬ್ದಾರಿಯುತವಾಗಿ ತೊಡಗಿಸಿ ಕೊಳ್ಳುತ್ತಿದೆ ಎಂದು ರೋಟರಿ ಕ್ಲಬ್ನ ಮಾಜಿ ಎ.ಜಿ. ಡಾ. ಸಿ. ಪ್ರಶಾಂತ್ ಅಭಿಪ್ರಾಯಪಟ್ಟರು. ಗುಡುಗಳಲೆ ಆರ್ವಿ ಕಲ್ಯಾಣ ಮಂಟಪದಲ್ಲಿ ಶನಿವಾರಸಂತೆ ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ರೋಟರಿ ಸಂಸ್ಥೆಯಿಂದ ಹಲವಾರು ಸಮಾಜ ಮುಖಿ ವಿಶೇಷ ಹಾಗೂ ವಿಭಿನ್ನವಾದ ಕಾರ್ಯಗಳು ನಡೆಯುತ್ತಿದ್ದು, ಈ ಮೂಲಕ ರೋಟರಿ ಸಂಸ್ಥೆ ಸದಸ್ಯರು ಜವಾಬ್ದಾರಿಯುತವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುತ್ತಿರುವದು ರೋಟರಿ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಕೆ.ಕೆ. ವಿಶ್ವನಾಥ್ ಮಾತನಾಡಿ, ಪ್ರತಿಯೊಬ್ಬರೂ ತಾವು ದುಡಿದ ಸ್ವಲ್ಪ ಭಾಗವನ್ನು ಸಮಾಜ ಸೇವೆ ಮತ್ತು ಬಡವರ ಏಳಿಗೆಗಾಗಿ ಮೀಸಲಿಟ್ಟರೆ ಆತ್ಮ ಸಂತೃಪ್ತಿ ಸಿಗುತ್ತದೆ ಎಂದರು. ರೋಟರಿ ಸಂಸ್ಥೆ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುವದರಿಂದ ಸಮಾಜ ಅಭಿವೃದ್ಧಿಯಾಗುವದರ ಜೊತೆಯಲ್ಲಿ ಮಾನವೀಯತೆ, ಮತ್ತು ವ್ಯಕ್ತಿತ್ವದ ಘನತೆ ಮತ್ತಷ್ಟು ವೃದ್ಧಿಯಾಗುತ್ತದೆ, ಈ ದಿಸೆಯಲ್ಲಿ ಸಂಸ್ಥೆಯ ಸದಸ್ಯರು ಜನರ ಕಷ್ಟಗಳಿಗೆ ಸ್ಪಂದಿಸುವಂತ ಮನೋಭಾವನೆ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎ.ಡಿ. ಮೋಹನ್ಕುಮಾರ್, ನಿಯೋಜಿತ ಅಧ್ಯಕ್ಷ ಶಂಭು, ನಿಯೋಜಿತ ಕಾರ್ಯದರ್ಶಿ ಹೆಚ್.ಪಿ. ಚಂದನ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.