ಶನಿವಾರಸಂತೆ, ಅ. 5: ಶನಿವಾರಸಂತೆ ವಿಶಾಲವಾದ ಹೋಬಳಿ ಕೇಂದ್ರವಾಗಿದ್ದು, ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ಇಲ್ಲಿಯ ನೆಮ್ಮದಿ ಕೇಂದ್ರದಿಂದ ಜನತೆಗೆ ನೆಮ್ಮದಿಯೇ ಇಲ್ಲದಂತಾಗಿದೆ. ರೈತಾಪಿ ಜನರಿರುವ ಹೋಬಳಿಯಲ್ಲಿ ಒಂದು ಸಣ್ಣ ಕೆಲಸಕ್ಕೂ ದಿನಗಟ್ಟಲೆ ನೆಮ್ಮದಿ ಕೇಂದ್ರಕ್ಕೆ ಅಲಿಯಬೇಕಾಗಿದೆ.

ಆಧಾರ್ ಕಾರ್ಡ್, ವೃದ್ಧಾಪ್ಯ ವೇತನ, ಆರ್‍ಟಿಸಿ, ಆದಾಯ ದೃಢೀಕರಣ ಪತ್ರ, ಜಾತಿ ದೃಢೀಕರಣ ಪತ್ರ ಇನ್ನಿತರ ಎಲ್ಲಾ ಮಾಹಿತಿಗಳನ್ನು ನೆಮ್ಮದಿ ಕೇಂದ್ರದಿಂದಲೇ ಪಡೆಯಬೇಕಾಗಿರುವದರಿಂದ ಈ ಹೋಬಳಿಯಲ್ಲಿ ಸಾವಿರಾರು ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ತೀವ್ರ ತೊಂದರೆ ಪಡುವಂತಾಗಿದೆ. ಹಳ್ಳಿಗಾಡಿನಿಂದ ಬರುವ ಜನರಿಗೂ ತುಂಬಾ ತೊಂದರೆಯಾಗಿದೆ. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಿ ಜನತೆಗೆ ಸ್ಪಂದಿಸಬೇಕೆಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಡಿ.ಪಿ. ಬೋಜಪ್ಪ, ಕ್ಷೇತ್ರ ಉಪಾಧ್ಯಕ್ಷ ಬಿ.ಎನ್. ಮುತ್ತೇಗೌಡ, ಜಿಲ್ಲಾ ವಕ್ತಾರ ಎಂ.ಎ. ಆದಿಲ್ ಪಾಷಾ, ಹೋಬಳಿ ಮಹಿಳಾ ಘಟಕದ ಅಧ್ಯಕ್ಷೆ ಕುಸುಮಾ ಸುಧಾಕರ್, ಆಲೂರು ಸಿದ್ದಾಪುರ ಕ್ಷೇತ್ರದ ಅಧ್ಯಕ್ಷ ಸೀಗೆಮರೂರು ಕುಮಾರಸ್ವಾಮಿ, ಸಿ.ಕೆ. ಪೃಥ್ವಿ, ಲಿಯಾಕತ್ (ಮುನ್ನ) ರಾಜು, ಕೃಷ್ಣೆಗೌಡ ಇತರರು ಒತ್ತಾಯಿಸಿದ್ದಾರೆ.