ಸುಂಟಿಕೊಪ್ಪ, ಅ.5: ಅಪ್ರಾಪ್ತ ಬಾಲಕಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಟ್ಟಗೇರಿ ತೋಟದಲ್ಲಿ ನಡೆದಿದೆ.

ಕುಶಾಲನಗರದ ಶಾಲೆಯೊಂದರಲ್ಲಿ ಸರಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆಯನ್ನು ಹಾಸ್ಟೆಲಿಗೆ ಸೇರಿಸಿದ್ದರು. ಗಾಂಧಿ ಜಯಂತಿ ರಜೆ ಹಿನೆÀ್ನಲೆ ಮನೆಗೆ ಆಗಮಿಸಿದ್ದ ಈಕೆ ಮನೆಯಲ್ಲಿ ಅಜ್ಜಿ ಮಾತ್ರ ಇದ್ದ ಸಂದರ್ಭ ಕುತ್ತಿಗೆಗೆ ವೇಲಿನಿಂದ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿಷಯವರಿತ ಅಕ್ಕಪಕ್ಕದವರು ಕೂಡಲೇ ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆತಂದರಾದರೂ ಆದಾಗಲೇ ಮೃತಪಟ್ಟಿದ್ದಳು. ಆತ್ಮಹತ್ಯೆಗೆ ನಿಜವಾದ ಕಾರಣ ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ.