ಮಡಿಕೇರಿ, ಅ. 5: 2018-19ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಟೇಬಲ್ ಟೆನ್ನಿಸ್ ಕ್ರೀಡಾಕೂಟವನ್ನು ಸ.ಮಾ.ಪ್ರಾ.ಶಾಲೆ ಚೆಟ್ಟಳ್ಳಿಯವರು ಸಂಘಟಿಸಿದ್ದರು. ಕ್ರೀಡಾಕೂಟದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪ್ರಮಿಳಾ, ಶಾಲಾ ಮುಖ್ಯೋಪಾಧ್ಯಾಯಿನಿ ಚೆಟ್ರಂಡ ವಸಂತಿ ಪೂಣಚ್ಚ, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕರಾದ (ಪ್ರಬಾರ) ಶ್ರೀನಿವಾಸ್ ಮತ್ತು ಮಡಿಕೇರಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾಗಯ್ಯಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಚೆಟ್ರಂಡ ವಸಂತಿ ಪೂಣಚ್ಚ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಉತ್ತಮವಾದ ಕ್ರೀಡಾಕೂಟದ ಆಯೋಜನೆ ಯೊಂದಿಗೆ ಉತ್ತಮ ಭೋಜನದ ವ್ಯವಸ್ಥೆ ಮತ್ತು ವಿಜೇತರಿಗೆ ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳಿಗೂ ನಗದು ಬಹುಮಾನವನ್ನು ನೀಡಲಾಯಿತು.
ಫಲಿತಾಂಶ
ಪ್ರೌಢಶಾಲಾ ಬಾಲಕರ ವಿಭಾಗ -ಪ್ರಥಮ ಸ್ಥಾನ - ಶಾಂತಿನಿಕೇತನ ಪ್ರೌಢಶಾಲೆ, ಕೊಡಗರಹಳ್ಳಿ. ಪ್ರೌಢಶಾಲಾ ಬಾಲಕಿಯರ ವಿಭಾಗ -ಪ್ರಥಮ ಸ್ಥಾನ - ಸಂತ ಅಂಥೋಣಿ ಪ್ರೌಢಶಾಲೆ, ಪೊನ್ನಂಪೇಟೆ. ಪ್ರಾಥಮಿಕ ಶಾಲಾ ಬಾಲಕರ ವಿಭಾಗ -ಪ್ರಥಮ ಸ್ಥಾನ - ಸಂತ ಮೇರಿಸ್ ಪ್ರಾಥಮಿಕ ಶಾಲೆ, ಸುಂಟಿಕೊಪ್ಪ. ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ-ಪ್ರಥಮ ಸ್ಥಾನ- ಸಂತ ಮೇರಿಸ್ ಪ್ರಾಥಮಿಕ ಶಾಲೆ, ಸುಂಟಿಕೊಪ್ಪ.
 
						