ಕೂಡಿಗೆ , ಅ. 5 : ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಲಿಂಗಪುರ ಗ್ರಾಮ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಹತ್ತಕ್ಕೂ ಹೆಚ್ಚು ಕಾಡಾನೆಗಳು ತೋಟ, ಭತ್ತದ ಗದ್ದೆ, ಕೃಷಿ ಮಾಡಿರುವ ಭೂಮಿಯೊಳಗೆ ನುಗ್ಗಿ ಲಕ್ಷಾಂತರ ರೂಪಾಯಿ ವೆಚ್ಚದ ಬೆಳೆಯನ್ನು ಹಾನಿ ಮಾಡಿವೆ.
ರೈತರು ಬೆಳೆದಿದ್ದ ಭತ್ತದ, ಕೆಸ, ಜೋಳ ಹಾಗೂ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳು ಬೆಳೆಗಳನ್ನು ಹಾನಿ ಮಾಡಿ, ತೋಟಕ್ಕೆ ಅಳವಡಿಸಿದ್ದ ಪೈಪ್‍ಗಳನ್ನು ತುಳಿದು ಸಂಪೂರ್ಣ ಹಾನಿ ಮಾಡಿ ರೈತರು ಲಕ್ಷಾಂತರ ರೂಪಾಯಿಗಳ ನಷ್ಟ ಅನುಭವಿಸುವಂತೆ ಮಾಡಿವೆ. ಗ್ರಾಮಸ್ಥರಾದ ನಾಪಂಡ ಮುತ್ತಪ್ಪ, ಅನಂತ್, ಗಿರೀಶ್, ಗೋವಿಂದ್, ಚಲುವರಾಜು, ಪ್ರಕಾಶ್ ಸೇರಿದಂತೆ 25ಕ್ಕೂ ಹೆಚ್ಚು ರೈತರುಗಳ ಬೆಳೆ ನಾಶವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರೈತರು ಆಗ್ರ್ರಹಿಸಿದ್ದಾರೆ.